ನೀರು ಕುಡಿಯುತ್ತಿದ್ದಾಗ ಜಾಗ್ವಾರ್ ಬಾಯಿಗೆ ಸಿಕ್ಕ ಹೆಬ್ಬಾವು! ಮುಂದೆನಾಯ್ತು..!!

ಜಾಗ್ವಾರ್‌ ಗಳು ಪ್ರಾಣಿಗಳ ಬೇಟೆಗೆ ಹೆಸರುವಾಸಿಯಾಗಿವೆ. ಈ ಜಾಗ್ವಾರ್ ಗಳು ತಮ್ಮೆದರು ಕಾಣಿಸಿಕೊಳ್ಳುವ ಎಲ್ಲ ಪ್ರಾಣಿಗಳ ಮೇಲೆ ದಾಳಿ ನಡೆಸುವ ಸಾಮಾರ್ಥ್ಯವನ್ನು ಹೊಂದಿವೆ. ಹೀಗೆ ಪ್ರಾಣಿಗಳ ಬೇಟೆ(Animals)ಯಾಡುವ ದೃಶ್ಯಗಳು ಸೋಶಿಯಲ್ ಮೀಡಿಯಾ(Social Media)ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ. ಇದೀಗ ನೀರು ಕುಡಿಯಲು ಹೋಗಿದ್ದ ಜಾಗ್ವಾರ್ (Jaguar) ಬಾಯಿಗೆ ದೈತ್ಯ ಹೆಬ್ಬಾವು ಆನಕೊಂಡ (Big Python) ಸಿಲುಕಿ ಒದ್ದಾಡಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನೀರು ಕುಡಿಯುತ್ತಿದ್ದ ಜಾಗ್ವಾರ್ ಗೆ ಅಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ನೀರು ಕುಡಿಯುವಾಗಲೇ ಹೆಬ್ಬಾವನ್ನು ಬೇಟೆಯಾಡಲು ಜಾಗ್ವಾರ್ ಮುಂದಾಗಿದೆ. ಹೆಬ್ಬಾವಿನ ಮೇಲೆ ದಾಳಿ ನಡೆಸಿದ ಜಾಗ್ವಾರ್ ತನ್ನ ಹಲ್ಲುಗಳಿಂದ ಅದನ್ನು ಬಿಗಿಯಾಗಿ ಹಿಡಿದಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಜಾಗ್ವಾರ್ ಹೆಬ್ಬಾವನ್ನು ಬೇಟೆಯಾಡುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ನದಿಯಲ್ಲಿ ನೀರು ಕುಡಿಯುತ್ತಿದ್ದ ಹಾವನ್ನು ಕಂಡ ಕೂಡಲೇ ಅದರ ಮೇಲೆ ದಾಳಿ ನಡೆಸುತ್ತದೆ. ತನ್ನ ಹಲ್ಲುಗಳಿಂದ ಹೆಬ್ಬಾವನ್ನು ಕಚ್ಚಿ ನೀರಿನಿಂದ ಹೊರ ತೆಗೆಯುತ್ತದೆ. ನಂತರ ಜಾಗ್ವಾರ್​ ತನ್ನ ಹಲ್ಲುಗಳಿಂದಲೇ ಹೆಬ್ಬಾವನ್ನು ಕಚ್ಚಿದೆ. ಈ ವಿಡಿಯೋದಲ್ಲಿ ಇತರ ಸಣ್ಣ ಪ್ರಾಣಿಗಳು ಈ ಬೇಟೆಯನ್ನು ನೋಡುತ್ತಿರುವ ದೃಶ್ಯಗಳನ್ನು ತೋರಿಸಲಾಗಿದೆ.

ಜಾಗ್ವಾರ್ ‌ಗಳು ಹೆಚ್ಚು ಶಕ್ತಿಯುತವಾದ ಕಚ್ಚುವಿಕೆಯನ್ನು ಅಂದ್ರೆ ಬಾಯಲ್ಲಿ ತನ್ನ ಬೇಟೆಯನ್ನು ಬಲವಾಗಿ ಹಿಡಿದುಕೊಳ್ಳುವ ಸಾಮಾರ್ಥ್ಯವನ್ನು ಹೊಂದಿವೆ. ಜಾಗ್ವಾರ್ ಹಲ್ಲುಗಳು ಮೊಸಳೆಗಳ ದಪ್ಪ ಚರ್ಮ ಮತ್ತು ಆಮೆಗಳ ಗಟ್ಟಿಯಾದ ಚಿಪ್ಪುಗಳ ಮೂಲಕ ಕಚ್ಚುವಷ್ಟು ಬಲವಾಗಿರುತ್ತವೆ. ಯಾವುದೇ ಬೇಟೆಯನ್ನಾಗಲಿ ಅದು ತನ್ನ ಚೂಪಾದ ಹಲ್ಲುಗಳಿಂದಲೇ ತನ್ನ ವಶಕ್ಕೆ ತೆಗೆದುಕೊಳ್ಳುತ್ತದೆ