ಚೀನಾದಲ್ಲಿ, ಮಾನವ ಮುಖದ ಹಂದಿಮರಿ ಜನಿಸಿತು ಮತ್ತು ವೈದ್ಯರು ಆಶ್ಚರ್ಯಚಕಿತರಾದರು.

ಸಾಮಾನ್ಯವಾಗಿ ಪ್ರಾಣಿಗಳು ಮನುಷ್ಯ ರೂಪ ತಾಳುವುದನ್ನು ಸಿನಿಮಾಗಳಲ್ಲಿ ಮಾತ್ರ ಕಾಣುತ್ತೇವೆ. ಆದರೆ ಚೀನಾ ದೇಶದಲ್ಲಿ ಇದು ನಿಜವಾಗಿಯೂ ನಡೆದು ಬಿಟ್ಟಿದೆ. ಹೌದು ಚೀನಾ ರೈತನೊಬ್ಬನ ಹೊಲದಲ್ಲಿ ಮನುಷ್ಯನ ರೂಪ ತಾಳುವ ವಿಚಿತ್ರ ಹಂದಿ ಜನಿಸಿದ್ದು ಆದರೆ ಇದರ ಮುಖದ ಮೇಲೆ ಯೋನಿ ಇರುವುದು ಅಚ್ಚರಿ ಮೂಡಿಸಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಸುತ್ತಾಮುತ್ತಲಿನ ಜನರು ಇದನ್ನು ನೋಡಲು ತಂಡೋಪತಂಡವಾಗಿ ಬಂದಿದ್ದಾರೆ.
ಇನ್ನು ಹಂದಿ ಬರೋಬ್ವರಿ 19 ಮರಿಗಳನ್ನು ಹಾಕಿದ್ದು ಕೊನೆಯ ಮರಿ ಈ ರೀತಿ ಜನಿಸಿದೆ. ಪತ್ರಿಕೆಯಲ್ಲಿ ಈ ಸುದ್ದಿ ವರದಿಯಾಗುತ್ತಿದ್ದಂತೆ ಹಲವರು ಈ ವಿಚಿತ್ರ ಹಂದಿ ಮರಿಯನ್ನು ಖರೀದಿಸಲು ಮುಂದಾಗಿದ್ದರು ಎನ್ನಲಾಗಿದೆ. ಇನ್ನು ವಿಚಿತ್ರವಾಗಿ ಜನಿಸಿರುವ ಹಂದಿ ಮರಿಯನ್ನು ಮಾರಿ ಹಣ ಸಂಪಾದಿಸಬೇಕು ಎಂದು 40 ವರುಷದ ರೈತ ಟಾವೋ ಯೋಚನೆ ಮಾಡಿದ್ದ. ಆದರೆ ವಿಪರ್ಯಾಸವೆಂಬಂತೆ ಕೆಲವೇ ದಿನಗಳಲ್ಲಿ ಈ ವಿಚಿತ್ರ ಹಂದಿ ಮರಿ ಪ್ರಾಣ ಕಳೆದುಕೊಂಡಿದೆ. ಇದರಿಂದ ರೈತ ಟಾವೋ ಕಂಗಲಾಗಿದ್ದಾನೆ ಎನ್ನಲಾಗಿದೆ.

ಇತ್ತೀಚೆಗೆ ಭಾರತದಲ್ಲೂ ಕೂಡ ಈ ರೀತಿಯ ವಿಚಿತ್ರ ಘಟನೆ ನಡಿದಿದ್ದು
ಗದಗ ಜಿಲ್ಲೆಯ ಭೈರಾಪುರ ಬೆಟ್ಟದಲ್ಲಿ ಮನುಷ್ಯನ ಮುಖ ಹೋಲುವ ಹಿಟ್ಲರ್ ಕೀಟವೊಂದು ಪತ್ತೆಯಾಗಿತ್ತು. ಹೌದು ಪೆಂಟ್ಯಾಟೊಮಿಡೆ ಜಾತಿಗೆ ಸೇರಿದ ಮಾನವ ಮುಖ ಹೋಲುವ ಅಪರೂಪದ ಕೀಟ ಇದಾಗಿದ್ದು ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಭೈರಾಪೂರ ಬೆಟ್ಟದಲ್ಲಿ ಪತ್ತೆಯಾಗಿದೆ.


ಇನ್ನು ಈ ಕೀಟದ ಮೈ ಬಣ್ಣ ಹಳದಿಯಾಗಿದ್ದು ಬಹಳ ಸುಂದರವಾಗಿದೆ. ಈ ಕೀಟವನ್ನು ವೈಜ್ಞಾನಿಕವಾಗಿ ಕೆಟಾಕ್ಯಾಂಥಸ್ ಇನ್‌ಕಾರ್ನೇಟಸ್ ಎಂದು ಕರೆಯುತ್ತಾರೆ. ಸಾಮಾನ್ಯ ಭಾಷೆಯಲ್ಲಿ ಹಿಟ್ಲರ್ ಕೀಟ ಅಂತಾ ಕರೆಯುತ್ತಾರೆ. ಇಕ್ಸೋರಾ ಗೋಡಂಬಿ ಗಿಡ ಗುಲ್‌ಮೋಹರ್ ಮತ್ತು ಶಿವನಿ ಮರಗಳು ಈ ಕೀಟಗಳಿಗೆ ಆಥಿತೇಯ ಸಸ್ಯಗಳಾಗಿದ್ದು ಆಥಿತೇಯ ಸಸ್ಯಗಳ ಎಲೆಗಳ ಅಡಿಯಲ್ಲಿ ಹೆಣ್ಣು ಕೀಟವು 150ರಿಂದ 200 ಮೊಟ್ಟೆಗಳನ್ನಿಡುತ್ತದೆ. ಹಿಟ್ಲರ್ ಕೀಟವು 7 ರಿಂದ 9 ತಿಂಗಳ ಜೀವಿತಾ ಅವಧಿ ಹೊಂದಿದ್ದು ಇವು ತಮ್ಮ ಜೀವನ ಚಕ್ರದಲ್ಲಿ ಎರಡು ಪೀಳಿಗೆಗಳನ್ನು ಉತ್ಪಾದಿಸುತ್ತವೆ.

ಇನ್ನು ಪೆಂಟ್ಯಾಟೊಮಿಡೆ ಕೀಟಗಳು ನಿಸರ್ಗದಲ್ಲಿ ವೈರಿಗಳಿಂದ ರಕ್ಷಣೆ ಪಡೆಯಲು ಫೇರಮೊನ್ ಸ್ರವಿಸಿ ಗುಂಪುಗುಂಪಾಗಿ ಆಥಿತೇಯ ಸಸ್ಯದ ಕಾಂಡದ ಮೇಲೆ ವಾಸಿಸುತ್ತವೆ. ಈ ರಕ್ಷಣಾ ತಂತ್ರವು ಸಂತಾನೋತ್ಪತ್ತಿಗೆ ಕೂಡಾ ಸಹಾಯವಾಗಿದ್ದು ಇವು ಆಥಿತೇಯ ಸಸ್ಯದ ಎಲೆ ರಸ ಮತ್ತು ಹಣ್ಣುಗಳ ರಸವನ್ನು ಹೀರುತ್ತವೆ. ಕ್ಯಾಟಕ್ಯಾಂಥಸ್ ಇನ್‌ಕಾರ್ನೇಟಸ್ ಭಾರತ ಮಡಗಾಸ್ಕರ್ ಶ್ರೀಲಂಕಾ ಮ್ಯಾನ್ಮಾರ್ ಥೈಲ್ಯಾಂಡ್ ಚೀನಾ ಇಂಡೋನೇಷ್ಯಾ ಮಲೇಷ್ಯಾ ಫಿಲಿಫೈನ್ಸ್ ಪಾಪುವಾ ನ್ಯೂ ಗಿನಿಯಾ ಜಪಾನ್ ದಕ್ಷಿಣ ಕೊರಿಯಾ ಮತ್ತು ಪಾಕಿಸ್ತಾನ ದೇಶಗಳಲ್ಲಿ ಸಾಮಾನ್ಯವಾಗಿ ಹಂಚಿಕೆಯಾಗಿವೆ.


ಇನ್ನು ಕೀಟಗಳು ಉನ್ನತ ಸ್ಥರದ ಜೀವಿಗಳಿಗೆ ಆಹಾರ ಒದಗಿಸುವ ಮೂಲಕ ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೀಟಗಳು ನಿಸರ್ಗದಲ್ಲಿ ನೈಸರ್ಗಿಕವಾಗಿ ನಿಯಂತ್ರಿಸಲ್ಪಡುತ್ತವೆ.