Animal: ಪ್ರಪಪಂಚದಲ್ಲೇ ಮೊದಲ ಮೂರು ಕಣ್ಣಿನ ಆಕಳು ಕರು ಪತ್ತೆ, ಎಲ್ಲಿ ಗೊತ್ತಾ? ನೋಡಿ ಫೋಟೋಸ್

ಸದ್ಯ ರಾಜ್​​​ನಂದಗಾಂವ್‌ನಲ್ಲಿ ಮೂರು ಕಣ್ಣುಗಳಿರುವ ಕರುವೊಂದು ಜನುಮ ತಾಳಿದ್ದು ಇದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಹೌದು ಅಲ್ಲದೆ ಇದು ದೇವರ ದರ್ಶನವೆಂಬ ನಂಬಿಕೆಯಿಂದ ಕರುವನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದು ಈ ರೀತಿಯ ಅಪರೂಪದ ಕರುವನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದು ಕೆಲವರು ಇದು ಭೋಲೆನಾಥನ ಅವತಾರವೆಂದು ಕೂಡ ನಂಬಿದ್ದಾರೆ. ಹೌದು ಅಷ್ಟೇ ಅಲ್ಲದೇ ಅಗರಬತ್ತಿ ಹೂ ತೆಂಗಿನಕಾಯಿ ಮತ್ತು ಹಣವನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಕರುವಿಗೆ ಎರಡು ಕಣ್ಣುಗಳ ಜೊತೆ ಹಣೆಯ ಮಧ್ಯದಲ್ಲಿ ಮತ್ತೊಂದು ಕಣ್ಣು ಹಾಗೂ ಮೂಗಿನಲ್ಲಿ ನಾಲ್ಕು ಹೊರಳೆಗಳಿವೆ.

ಗಂಡಾಯಿ ಪ್ರದೇಶದ ಬುಂದೇಲಿಯ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಲೋಧಿ ನವಗಾಂವ್‌ನಲ್ಲಿ ಹಸುವೊಂದು ಇಂತಹ ಕರುವಿಗೆ ಜನ್ಮ ನೀಡಿದೆ. ಇನ್ನ ಲೋಧಿ ನವಗಾಂವ್‌ನ ಹೇಮಂತ್ ಚಂದೇಲ್ ಅವರ ಹಸು ಈ ರೀತಿಯ ಕರುವಿಗೆ ಜನ್ಮ ನೀಡಿದ್ದ ಅವರು ಕೃಷಿಯ ಹೊರತಾಗಿ ಹಸು ಸಾಕಣೆಯಲ್ಲಿ ಕೂಡ ತೊಡಗಿದ್ದರು. ಹಸು ಕಳೆದ ಕೆಲವು ತಿಂಗಳ ಹಿಂದೆ ಗರ್ಭ ಧರಿಸಿದ್ದು ಸಂಜೆ 7 ಗಂಟೆ ಸುಮಾರಿಗೆ ಹಸು ಕರುವಿಗೆ ಜನ್ಮ ನೀಡಿದೆ.

ಇನ್ನು ಈ ಕರುವಿಗೆ ಮೂರು ಕಣ್ಣುಗಳಿದ್ದು ಒಂದು ಕಣ್ಣು ತಲೆಯ ಮಧ್ಯಭಾಗದಲ್ಲಿದೆ. ಅದರ ಮೂಗಿನಲ್ಲಿ ಎರಡರ ಬದಲು ನಾಲ್ಕು ಹೊರಳೆಗಳಿವೆ. ಅಲ್ಲದೆ ಇದರ ಬಾಲವು ಕೂದಲು ರಹಿತವಾಗಿದೆ. ಪಶುವೈದ್ಯ ಡಾ.ನರೇಂದ್ರ ಸಿಂಗ್ ಅವರು ಈ ಬಗ್ಗೆ ಮಾತನಾಡಿದ್ದು ಇದು ಯಾವುದೇ ರೀತಿಯ ಪವಾಡ ಅಲ್ಲ. ಹಸುವಿನ ಹೊಟ್ಟೆಯಲ್ಲಿ ಭ್ರೂಣವು ಸರಿಯಾಗಿ ಬೆಳವಣಿಗೆಯಾಗದ ಕಾರಣದಿಂಫ ಈ ರೀತಿ ಕರು ಹುಟ್ಟಿದೆ. ನಿಗದಿತ ಸಮಯದಲ್ಲಿ ಭ್ರೂಣವು ಸರಿಯಾಗಿ ಬೆಳವಣಿಗೆ ಆಗದಿದ್ದಾಗ ಇಂತಹ ಸಮಸ್ಯೆಗಳು ಮುನ್ನೆಲೆಗೆ ಬರುತ್ತವೆ ಎಂದಿದ್ದಾರೆ.

ಇನ್ನು ಅದೇ ರೀತಿ 2 ತಲೆ ಹಾಗೂ ಮೂರು ಕಣ್ಣು ಇರುವ ಕರುವೊಂದು ಜನನವಾಗಿದ್ದು ನವರಾತ್ರಿ ಸದಂರ್ಭದಲ್ಲಿಯೇ ಇಂಥಹ ವಿಚಿತ್ರ ಕರುವೊಂದು ಜನಿಸಿದ್ದರಿಂದ ದುರ್ಗಾದೇವಿಯ ಅವತಾರ ಎಂದು ಜನರು ಪೂಜೆ ಮಾಡಿರುವ ಘಟನೆ ಒರಿಸ್ಸಾದ ನಬ್ರಂಗ್​ಪುರದಲ್ಲಿ ನಡೆದಿದೆ. ಹೌದು ನಬ್ರಂಗ್‍ಪುರದ ಧನಿರಾಂ ಅವರ ಕೊಟ್ಟಿಗೆಯಲ್ಲಿರುವ ಹಸುವಿಗೆ ಈ ಅಪರೂಪವಾದ ವಿಶೇಷವಾದ ಕರು ಜನಿಸಿದ್ದು ಈ ಕರುಗೆ ಎರಡು ತಲೆ ಮೂರು ಕಣ್ಣುಗಳಿವೆ. ಹೀಗೆ ವಿಶೇಷವಾಗಿ ಜನಿಸಿದ ಈ ಕರುವನ್ನು ನೋಡಿದ ಹಸುವಿನ ಮಾಲೀಕ ಕೂಡ ಅಚ್ಚರಿ ಪಟ್ಟಿದ್ದಾರೆ. ಬಳಿಕ ಈ ವಿಷಯವನ್ನು ಊರಿನವರಿಗೆ ತಿಳಿಸಿದ್ದಾರೆ. ಕರು ಆರೋಗ್ಯದಿಂದಿದ್ದು ದುರ್ಗಾ ಮಾತೆಯ ಪ್ರತಿರೂಪ ಎಂದು ಪೂಜೆ ಮಾಡಿದ್ದಾರೆ. ಇನ್ನು ಎರಡು ವರ್ಷಗಳ ಹಿಂದೆ ಧನಿರಾಂ ಈ ಹಸುವನ್ನು ಖರೀದಿಸಿದ್ದು ಈ ಹಸು ಇತ್ತೀಚೆಗೆ ಗರ್ಭ ಧರಿಸಿತ್ತು. ನವರಾತ್ರಿಯ ದಿನವೇ ಹಸು ಹೆಣ್ಣು ಕರುವಿಗೆ ಜನ್ಮ ನೀಡಿದ್ದು ಹೀಗೆ ವಿಶೇಷವಾಗಿರುವ ಈ ಕರು ಎಲ್ಲರ ಗಮನ ಸೆಳೆಯುತ್ತಿದೆ.