Video: ಜೋಡಿ ನಾಗರ ಹಾವಿಗೆ ಹಾಲಿಟ್ಟ ಗ್ರಾಮಸ್ಥರು, ನಂತರ ಅಲ್ಲಿ ಆಗಿದ್ದೆ ಬೇರೆ…ನೋಡಿ ವಿಡಿಯೋ

ನಾಗರ ಪಂಚಮಿ ದಿನದಂದು ಸಾವಿರಾರು ಲೀಟರ್ ಹಾಲು ಕಲ್ಲಿಗೆ ಎರೆಯಲಾಗುತ್ತದೆ. ಆದರೆ, ಹಾಲು ಹಾವಿನ ಆಹಾರವಲ್ಲ. ಅದು ಮಾಂಸಹಾರಿ ಅದಕ್ಕಾಗಿ ಕಲ್ಲಿಗೆ ಹಾಲು ಹಾಕುವ ಬದಲು ಮಕ್ಕಳಿಗೆ ಹಾಲು ಕುಡಿಸಬೇಕು  ಎಂಬ ಅಭಿಪ್ರಾಯ ಆಗಾಗ ಕೇಳಿ ಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌

ಹಾವುಗಳಿಗೆ ಆಹಾರ ನೀಡುವುದು ಪುಣ್ಯ ಎಂದು ಜನರು ನಂಬುತ್ತಾರೆ ಮತ್ತು ಹಾಗಾಗಿ ಅವುಗಳಿಗೆ ಹಾಲೆರೆದು ಅವರು ಸಂತೋಷಪಡುತ್ತಾರೆ. ವಾಸ್ತವದಲ್ಲಿ, ಇದು ಹಾಗಲ್ಲ. ಹಾವು ಹಾಲನ್ನು ಇಷ್ಟಪಡುವುದಿಲ್ಲ. ಹಾವುಗಳು ಮೊಟ್ಟೆಗಳನ್ನು ಇಡುವ ಸರೀಸೃಪಗಳಾಗಿವೆ. ಸಸ್ತನಿಗಳು ಮಾತ್ರ ಹಾಲು ಕುಡಿಯುವುದು. ಒತ್ತಾಯಪೂರ್ವಕವಾಗಿ ಕುಡಿಸುವ ಹಾಲು ಹಾವಿಗೆ ಹಾನಿಕಾರಕವಾಗಬಹುದು. ಕೆಲವೊಮ್ಮೆ ಹಾಲು ಹಾವಿನ ಶ್ವಾಸಕೋಶವನ್ನು ತಲುಪಿ ಸಾವಿಗೆ ಕಾರಣವಾಗಬಹುದು.  ಹಾವುಗಳು ಮಾಂಸಾಹಾರಿ ಪ್ರಾಣಿಗಳು. ಕೆಲ ಹಾವುಗಳು ಇಲಿ ಮೊಲ ದಂತಹ ಪ್ರಾಣಿಗಳನ್ನು ತಿಂದರೆ ಇನ್ನು ಕೆಲವು ಕಪ್ಪೆ, ಮೀನು, ಚಿಟ್ಟೆ, ಇತರ ಹಾವುಗಳನ್ನು ತಿನ್ನುತ್ತವೆ.

ಮಳೆ ಗಾಲದ ಸಮಯದಲ್ಲಿ ರಾತ್ರಿ ಹೊತ್ತು ಬಚ್ಚಲಮನೆ ಒಲೆಯ ಬಳಿ, ಬಿಸಿ ನೀರಿನ ಹಂಡೆಯ ಬಳಿ ಹಾವುಗಳು ಬಂದು ಮಲಗುವುದು. ಒಣ ಕಟ್ಟಿಗೆ ರಾಶಿಗಳಲ್ಲಿ , ಸರಕು-ಸಾಮಾಗ್ರಿಗಳನ್ನು ತುಂಬಿಟ್ಟ ಕಡೆ ಹಾವುಗಳು ಅವಿತುಕೊಳ್ಳುವುದು ಸಾಮಾನ್ಯ. ಇನ್ನು ಮನೆಯ ಸುತ್ತಮುತ್ತ ಪೊದೆಗಳು, ಗಿಡ-ಮರಗಳು ಜಾಸ್ತಿ ಇದ್ದಲ್ಲಿಯೂ ಹಾಗೂ ರೆಂಬೆ-ಕೊಂಬೆಗಳು, ಬಳ್ಳ್ಳಿಗಳು ಮನೆಗೆ ತಾಗಿಕೊಂಡಿದ್ದಲ್ಲಿ ಅವುಗಳ ಮೂಲಕ ಹಾವುಗಳು, ಹಾವಿನ ಮರಿಗಳು ಮನೆ ಸೇರುವುದುಂಟು. ಇಲಿ ಹಾಗೂ ಕೋಳಿ ಮೊಟ್ಟೆಯನ್ನು ತಿನ್ನಲು ಹಾವು ಬಂದರೆ ಭಯ ಭೀತರಾಗಿ ಉರಗ ತಜ್ಞರ ಸಹಾಯ ಕೇಳುತ್ತೇವೆ. ಅದೇ ರೀತಿ ಉತ್ತರ ಪ್ರದೇಶದ ಯುವಕನೊಬ್ಬ ಮುರಳಿ ವಾಲೆ ಹುಸಾಲ್ ಅನ್ನೊ ಯೂಟ್ಯೂಬ್ ಚಾನೆಲ್ ನೋಡಿ ಆ ವ್ಯಕ್ತಿಗೆ ಕರೆ ಮಾಡಿ ಕರೆದಿದ್ದಾನೆ.

ಅದಕ್ಕೆ ವ್ಯಕ್ತಿಕೂಡ ಉತ್ತರ ಪ್ರದೇಶದ ಜಂ ಪುರ್ ಸಿಟಿಗೆ ಬರುತ್ತಾನೆ ಅಲ್ಲಿ ಮನೆಯೊಂದರಲ್ಲಿ ಬೆರಣಿಯ ರಾಶಿಯ ನಡುವೆ ಎರಡು ಜೋಡಿ ನಾಗರ ಹಾವು ಕಾಣಸಿಗುತ್ತದೆ ಈಗ ಜನರು ಭಯದಿಂದ ಅದನ್ನೇ ನೋಡುತ್ತಿರುವ ದೃಶ್ಯ ಕಾಣುತ್ತದೆ. ಹಾವು ಸಿಗುತ್ತಲೆ ಅದರ ಬಗ್ಗೆ ಹಲವು ವರ್ಣನೆಯನ್ನು ಯೂಟ್ಯೂಬ್ ಚಾನೆಲ್ ಬ್ಲಾಗರ್ ಆದಂತಹ ಮುರಳಿ ಅವರು ಹೇಳುತ್ತಾರೆ. ಈ ಮೂಲಕ ಹಾವನ್ನು ಹಿಡಿದು ಅದನ್ನು ಬೀದಿ ಹತ್ತಿರ ಬಿಟ್ಟಿರುತ್ತಾನೆ ಈ ಸಂದರ್ಭದಲ್ಲಿ ಕೆಲವು ಜನರು ಹಾವಿಗೆ ಹಾಲಿಡುವುದು ಹಣ ಇಡುವ ಹಾಗೂ ಕೈ ಮುಗಿಯುವುದನ್ನು ಮಾಡುತ್ತಾರೆ ಇದನ್ನು ನೋಡಿದ ಬ್ಲಾಗರ್ ಮುರಳಿ ಅವರು ಹಾವು ಮಾಂಸಹಾರಿ ಅದಕ್ಕೆ ಇಲಿ, ಮೊಟ್ಟೆ, ಕೋಳಿ, ಕಪ್ಪೆ ಇಂತದ್ದು ಇಷ್ಟವಾಗುತ್ಗದೆ.ಹಾಲು ಕುಡಿಯಲಾರದು ಎಂದೆಲ್ಲ ಬುದ್ಧಿವಾದ ಹೇಳುತ್ತಾರೆ.ಜನರು ಹಾವಿಗಾಗಿ ಹಾಕಿದ ಹಣವನ್ನು ಸಂಗ್ರಹಿಸಿ ಅದನ್ನು ಟ್ರಸ್ಟ್ ಒಂದರ ಕಾರ್ಯಕ್ಕೆ ನೀಡುವುದಾಗಿ ತಿಳಿಸುತ್ತಾರೆ ಬಳಿಕ ಹಾವು ಸಹ ನಮ್ಮಂತೆಯೇ ಒಂದು ಜೀವಿ ಅಷ್ಟೇ ಅದು ತನ್ನ ಜೀವ ಭಯಕ್ಕೆ ಹೆಡೆಯೆತ್ತುತ್ತದೆ ಅಷ್ಟೇ ಅದು ಸಹ ಸಾದು ಪ್ರಾಣಿಯೇ ಆದರೆ ಪರಿಸ್ಥಿತಿ ವಿಕೋಪವಾದಗ ನಮ್ಮನ್ನು ಕಚ್ಚಲೂ ಬಹುದು ಎಂದು ಹೇಳಿ ಹಾಲು ಹಾವಿನ ಆಹಾರವಲ್ಲ ಎಂದು ತಿಳಿಸಿದರು.