ಮರದ ಮೇಲಿದ್ದ ಬಾವುಲಿ ಮೇಲೆ ದಾಳಿ ಮಾಡಿದ ವಿಷಕಾರಿ ಹಾವು, ನೋಡಿ ಫೋಟೋಸ್

ಸಾಮಾನ್ಯವಾಗಿ ಕಾಡು ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಹೌದು ಅವುಗಳಲ್ಲಿನ ಕೆಲ ವಿಡಿಯೋಗಳನ್ನು ಹಾಗೂ ಫೋಟೋಗಳನ್ನು ನೋಡಿ ನಮ್ಮ ಮೈಮೇಲಿನ ರೋಮಗಳೇ ಎದ್ದುನಿಲ್ಲುತ್ತವೆ. ಇತ್ತೀಚಿನ ದಿನಗಳಲ್ಲಿ ಇಂತಹ ಒಂದು ಪೋಟೋ ಇದೀಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದ್ದು ಅದನ್ನು ನೋಡಿ ಒಂದು ಕ್ಷಣ ನೀವೂ ಕೂಡ ಬೆಚ್ಚಿಬೀಳುವಿರಿ. ಹೌದು ಈ ಇಲ್ಲಿ ದೈತ್ಯ ಹೆಬ್ಬವೊಂದು ಭಯಾನಕ ಬಾವಲಿಯನ್ನ ಭೇಟೆಯಾಡಿದೆ.

ರೆಡ್‌ಲ್ಯಾಂಡ್‌ನ ಸ್ನೇಕ್ ಕ್ಯಾಚರ್ ತೆಗೆದ ವೀಡಿಯೊದಲ್ಲಿ ಟೋನಿ ಮಾರಿಸನ್ ಬ್ರಿಸ್ಬೇನ್‌ನಲ್ಲಿ ಮರದ ಮೇಲೆ ಬಾವಲಿ ಯನ್ನು ಹೆಬ್ಬಾವು ಸುತ್ತಿಕೊಂಡಿರುವ ಕ್ಷಣವನ್ನು ಸೆರೆಹಿಡಿದಿದ್ದಾರೆ. ಸರಿ ಸುಮಾರು ಅರ್ಧ ಘಂಟೆಯವರೆಗೆ ಕೂಡ ಬಾವಲಿಯನ್ನ ಹೆಬ್ಬಾವು ಸುತ್ತುವರೆದಿದ್ದು ಬಾವಲಿ ಪ್ರಾಣ ಕಳೆದು ಕೊಂಡ ನಂತರ ಹೆಬ್ಬಾವು ಅದನ್ನ ನುಂಗಿ ಹಸಿವನ್ನ ನೀಗಿಸಿಕೊಂಡಿದೆ. ಹಾವಿನ ಭಲವಾದ ಹಿಡಿತದಿಂದ ಬಾವಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಲ್ಲ.ರೆಕ್ಕೆ ಬಡೆಯಲು ಕೂಡ ಸಾಧ್ಯವಾಗದೇ ಬಾವಲಿ ಪ್ರಾಣ ಕಳೆದು ಕೊಂಡಿದ್ದು ನಂತರ ಸರಗವಾಗಿ ಹೆಬ್ಬಾವು ಬಾವಲಿಯನ್ನ ನುಂಗಿದೆ. ಮೊದಲ ಫೋಟೊದಲ್ಲಿ ಟೋನಿ ಮಾರಿಸನ್ ರವರು ಈ ಹಾವು ಬ್ಯಾಟ್‌ನ ರೆಕ್ಕೆಗಳನ್ನು ದಾಟಲು ಸಾಧ್ಯವಾಗಲಿಲ್ಲ ಮತ್ತು ಬಿಟ್ಟುಕೊಡಲು ನಿರ್ಧರಿಸಿತು ಎಂದು ಬರೆದುಕೊಂಡಿದ್ದರು.ಆದರೆ ಎರಡನೇ ಫೋಟೋದಲ್ಲಿ ಹೆಬ್ಬಾವು ನುಂಗುತ್ತಿರುವದನ್ನು ತೋರಿಸಿದ್ದಾರೆ. ಈ ಲೇಖನಿಯಲ್ಲಿ ತಾವು ಈ ಫೋಟೊವನ್ನ ನೋಡಬಹುದು.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಹೆಬ್ಬಾವಿನ ಬೇಟೆಗಳ ಹಲವಾರು ವಿಡಿಯೋಗಳು ವೈರಲ್ ಆಗುತ್ತಲೆ ಇರುತ್ತವೆ. ಇತ್ತೀಚೆಗಷ್ಟೇ ಮೊಸಳೆ ಹಾಗೂ ಹೆಬ್ಬಾವಿನ ವಿಡಿಯೋವಿಂದು ವೈರಲ್ ಆಗಿತ್ತು.ಮೊಸಳೆ ನೀರಿನಲ್ಲಿ ತನ್ನ ಬೇಟೆಗಾಗಿ ಕಾದಿದ್ದು ಏತನ್ಮಧ್ಯೆ, ಸುಮಾರು ಹತ್ತು ಅಡಿ ಉದ್ದದ ಹೆಬ್ಬಾವೊಂದು ಆಕಸ್ಮಿಕವಾಗಿ ನೀರಿಗೆ ಇಳಿಯುತ್ತದೆ. ಅದರ ಬಳಿಕ ಸೃಷ್ಟಿಯಾಗುವ ದೃಶ್ಯವನ್ನು ನೀವು ಈ ಹಿಂದೆ ಎಂದು ನೋಡಿರಲಿಕ್ಕಿಲ್ಲ. ಹೆಬ್ಬಾವನ್ನು ಎದುರಿಗೆ ನೋಡಿದ ಮೊಸಳೆ ಅದನ್ನು ಒಂದು ಸುಲಭ ಬೇಟೆ ಎಂದು ಭಾವಿಸ ತಪ್ಪು ಮಾಡುತ್ತದೆ. ಇದಾದ ನಂತರ ಮೊಸಳೆ ಹೆಬ್ಬಾವಿನ ಮೇಲೆ ದಾಳಿ ಮಾಡಿದ್ದು ಆದರೆ ಇದು ಮೊಸಳೆಗೆ ದುಬಾರಿಯಾಗಿ ಪರಿಣಮಿಸಿದೆ.

ಮೊಸಳೆ ತನ್ನ ದವಡೆಯಲ್ಲಿ ಹೆಬ್ಬಾವನ್ನು ಹಿಡಿಯಲು ಯತ್ನಿಸಿದ್ದು ಅದು ತಪ್ಪು ಎಂದು ನಂತರ ಅದರ ಅರಿವಿಗೆ ಬಂದಿದೆ. ಏಕೆಂದರೆ ಮೊಸಳೆ ಆ ಹೆಬ್ಬಾವನ್ನು ಬಾಯಿಗೆ ಹಿಡಿದ ತಕ್ಷಣ. ಹೆಬ್ಬಾವು ಕೂಡ ಆಕ್ರಮಣಕಾರಿಯಾಗಿದ್ದು ಮೊದಲು ಹೆಬ್ಬಾವು ತನ್ನ ಬಾಯಿಯಿಂದ ಆ ಭಯಂಕರ ಮೊಸಳೆಯ ದವಡೆಯನ್ನು ಕಚ್ಚುತ್ತದೆ ಮತ್ತು ನಂತರ ಅದು ಆ ಮೊಸಳೆಯನ್ನು ಸುತ್ತಿಕೊಳ್ಳಲು ಪ್ರಾರಂಭಿಸಿ ಮೊಸಳೆಯ ಪ್ರಾಣವನ್ನೆ ತೆಗೆಯುತ್ತದೆ.