Video: ನೀರಿನಿಂದ ಆಚೆ ಬಂದ ಮೊಸಳೆ ಮೇಲೆ ದಾಳಿ ಮಾಡಲು ಹಾರಿದ ಸಿಂಹ, ಮೊಸಳೆ ಬಲಿಯಾಯ್ತಾ? ನೋಡಿ ವಿಡಿಯೋ

ಕಾಡಿನ ರಾಜ ಸಿಂಹ. ಸಿಂಹದ ಗತ್ತು, ಘನ ಗಾಂಭೀರ್ಯ ನಡಿಗೆ, ಅದರ ತಾಕತ್ತು ಇವೆಲ್ಲವನ್ನೂ ಮನಗಂಡು ಸಿಂಹವನ್ನು ಕಾಡಿನ ರಾಜ ಎಂದು ಕರೆಯಲಾಗುತ್ತದೆ. ಒಂದಾನೊAದು ಕಾಲದಲ್ಲಿ ಎಂದು ಆರಂಭವಾಗುವ ಸಿಂಹದ ಶೌರ್ಯವನ್ನು ವಿವರಿಸುವ ಅನೇಕ ಕತೆಗಳನ್ನು ನಾವು ಕೇಳಿರುತ್ತೇವೆ, ನಮ್ಮ ಮಕ್ಕಳಿಗೂ ಹೇಳಿರುತ್ತೇವೆ. ಅದೇ ಕಾರಣಕ್ಕೆ ಸಿಂಹ ಅಂದ ಕೂಡಲೇ ಪುಟ್ಟ ಮಕ್ಕಳ ಕಂಗಳು ಕೂಡಾ ಅರಳುತ್ತವೆ. ಈ ಕಾಡಿನ ರಾಜನಿಗೆ ಸಂಬAಧ ಪಟ್ಟ ಅನೇಕ ವಿಡಿಯೋಗಳನ್ನು ನಾವು ನೋಡಿರುತ್ತೇವೆ. ಸಾಮಾನ್ಯವಾಗಿ ಆ ವಿಡಿಯೋಗಳಲ್ಲಿ ಸಿಂಹ ಬೇರೆ ಪ್ರಾಣಿಗಳ ಮೇಲೆರಗಿ ಹೋಗುವುದನ್ನೇ ನೋಡಿರುತ್ತೇವೆ.

ಸಿಂಹ ನೆಲದ ಮೇಲಿನ ಶಕ್ತಿ ಶಾಲಿ ಪ್ರಾಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರಿನೊಳಗಿರುವ ಪ್ರಾಣಿಗಳ ಬಗ್ಗೆ ಹೇಳುವುದಾದರೆ, ಅತ್ಯಂತ ಅಪಾಯಕಾರಿ ಪ್ರಾಣಿ ಎಂದ ಕೂಡಲೇ ಕಣ್ಣ ಮುಂದೆ ಬರುವುದು ಮೊಸಳೆ. ನೋಡುವುದಕ್ಕೂ ಭಯ ಹುಟ್ಟಿಸುವ ಮೊಸಳೆ ಸಮಯ ನೋಡಿ ಎದುರಿಗಿರುವವರನ್ನು ಬೇಟೆಯಾಡಿ ಬಿಡುತ್ತವೆ.

ಮೊಸಳೆಯ ಚಾಕಚಕ್ಯತೆಯ ಅನೇಕ ಕತೆಗಳನ್ನು ಕೂಡಾ ನಾವು ಕೇಳಿರುತ್ತೇವೆ. ಇಲ್ಲಿ ಒಂದು ವಿಡಿಯೋ ಇದೆ. ಈ ವೈರಲ್ ವಿಡಿಯೋದಲ್ಲಿ ಮೊಸಳೆ ಇರುವುದನ್ನು ಕಾಣಬಹುದು. ಒಂದು ಮೊಸಳೆ ಅದರ ಸುತ್ತಲೂ ಆವರಿಸಿ ನಿಂತಿರುವ ಸಿಂಹಗಳು. ಮೊದಲು ಮೊಸಳೆ ಮುಂದೆ ಕೇವಲ ಒಂದು ಸಿಂಹ ಬರುತ್ತದೆ. ಯಾವಾಗ ಮೊಸಳೆ ಸಿಂಹದತ್ತ ಮುನ್ನುಗ್ಗಿಕೊಂಡು ಬರುತ್ತದೆಯೋ ಆಗ ಅಕ್ಕ ಪಕ್ಕದಿಂದ ಸಿಂಹಗಳ ಗುಂಪೇ ಬರುತ್ತದೆ. ಆ ಮೊಸಳೆ ಮೇಲೆ ಎಲ್ಲಾ ಸಿಂಹಗಳು ಒಟ್ಟಿಗೆ ದಾಳಿಗೆ ಮುಂದಾಗುತ್ತದೆ. ಆದರೆ ಮೊಸಳೆ ಕಾಡಿನ ರಾಜನಿಗೂ ಬಗ್ಗುವುದಿಲ್ಲ, ಜಗ್ಗುವುದಿಲ್ಲ. ದಾಳಿಗೆ ಪ್ರತಿದಾಳಿ ಮಾಡುತ್ತದೆ. ಮೊಸಳೆ ಪ್ರತಿಧಾಳಿ ಮಾಡುತ್ತದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.