Video: ಚಿರತೆಯನ್ನು ನುಂಗುತ್ತಿರುವ ಹಾವನ್ನು ಕಂಡ ಕ್ಷಣ ಚಿಂಪಾಂಜಿ ಮಾಡಿದ್ದೇನು ನೋಡಿ, ವಿಡಿಯೋ

ಪ್ರಾಣಿಗಳ ನಡುವಿನ ಹೊಡೆದಾಟ ಕಾಡುಗಳಲ್ಲಿ ಸರ್ವೇಸಾಮಾನ್ಯ. ಬಲಿಷ್ಠ ಪ್ರಾಣಿಗಳು ಸಾಧು ಪ್ರಾಣಿಗಳ ಮೇಲೆ ದಾಳಿ ನಡೆಸಿ ಪ್ರಾಬಲ್ಯವನ್ನು ಸಾಧಿಸುತ್ತವೆ. ಕೆಲವೊಮ್ಮೆ ಚಿಕ್ಕ ಪ್ರಾಣಿಗಳೆಂದು ದಾಳಿ ಮಾಡಿದಾಗ ದೊಡ್ಡ ಪ್ರಾಣಿಗಳಿಗೂ ಅಪಾಯವಾಗುತ್ತದೆ. ಅದಕ್ಕೆ ಎಂಬಂತೆ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.ಸಮಸ್ಯೆಯನ್ನು ಎದುರಿಸುವ ಧೈರ್ಯ, ತಾಕತ್ತು ಇದ್ದರೆ ಎಂತಹ ಕಷ್ಟದಿಂದಲೂ ಪಾರಾಗಬಹುದು ಎಂಬದಕ್ಕೆ ಸಾಕ್ಷಿ ಇದು. ಯಾಕೆಂದರೆ, ಇಲ್ಲಿ ಶಿಕಾರಿಯ ಆಸೆಯಲ್ಲಿ ಬಂದಿದ್ದ ಹಾವೇ ಶಿಕಾರಿಯಾಗಿ ಹೋಗಿದೆ.ಆ ಹೆಬ್ಬಾವು ಭರ್ಜರಿ ಶಿಕಾರಿಯ ಆಸೆಯಿಂದ ಬಂದಿತ್ತು. ಹೀಗೆ ಭಾರೀ ಆಹಾರದ ಕನಸು ಕಾಣುತ್ತಾ ಹೊಂಚು ಹಾಕುತ್ತಿದ್ದ ಈ ಹೆಬ್ಬಾವಿಗೆ ಕಾಣಿಸಿದ್ದು ದೊಡ್ಡ ಚಿರತೆ. ಈ ಚಿರತೆ ಬಂದ ತಕ್ಷಣ ಕೈ ಕಾಲಿಗೆಲ್ಲಾ ಸುತ್ತು ಹಾಕಿ ಒಮ್ಮೆಲೆ ತಿನ್ನಬೇಕು ಎಂದು ಹೆಬ್ಬಾವು ಯೋಚಿಸಿದಂತಿತ್ತು. ಅದರಂತೆ ಚಂಗನೆ ಎಗರಿತ್ತು ಕೂಡಾ.

ಆದರೆ, ಚಿರತೆ ಭಯದಲ್ಲಿ ಓಡಲಿಲ್ಲ. ಬದಲಾಗಿ ಸಮರಕ್ಕೆ ನಿಂತಿತ್ತು. ಚಿರತೆಗೂ ಗೊತ್ತಿತ್ತು ತನ್ನ ಶಕ್ತಿ ಎಂತಹದ್ದು ಎಂಬ ಸತ್ಯ. ಹೀಗೆ ಕಾಡಿನ ಮಧ್ಯೆಯೇ ಶುರುವಾಗಿತ್ತು ಭಯಾನಕ ಕಾಳಗ.ವಿಡಿಯೋದಲ್ಲಿ ಕಾಡಿನಲ್ಲಿ‌ ಹೊರಟು ಬಂದ ಚಿರತೆ ಹೆಬ್ಬಾವನ್ನು ಕಚ್ಚಿಕೊಂಡು ಹೋಗಲು ಯತ್ನಿಸುತ್ತದೆ. ಆಗ ಹೆಬ್ಬಾವು ಕೋಪಗೊಂಡು ಚಿರತೆಯ ಕಾಲಿಗೆ ಕಚ್ಚುತ್ತದೆ. ಆದರೂ ವಿಚಲಿತವಾಗದ ಚಿರತೆ ಬಾಯಲ್ಲಿ ಕಚ್ಚಿದ್ದ ಹಾವನ್ನು ಎತ್ತಿ ಮೇಲಕ್ಕೆ ಎಳೆದೊಯ್ಯತ್ತದೆ. ಈ ವಿಡಿಯೋ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದೆ.ಈ ಆಘಾತಕಾರಿ ವಿಡಿಯೋ ನೋಡಿ ನೆಟ್ಟಿಗರು ಯಾರನ್ನೇ ಆದರೂ ಕೆಳಮಟ್ಟದಲ್ಲಿ ನೋಡಬಾರದು ಎಲ್ಲರಿಗೂ ಅವರದ್ದೇ ಆದ ರಕ್ಷಣಾ ಮನೋಭಾವ, ಶಕ್ತಿ ಇರುತ್ತದೆ ಎಂದಿದ್ದಾರೆ. ಸದ್ಯ ಯುಟ್ಯುಬ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದೆ.

ಬೃಹತ್​ ಗಾತ್ರದ ಹೆಬ್ಬಾವು ಹಾಗೂ ಹಸಿದ ಚಿರತೆ ನಡುವೆ ಈ ಭೀಕರ ಕಾಳಗ ನಡೆದಿದ್ದು, ಅರಣ್ಯದಲ್ಲಿ ಹೆಬ್ಬಾವು ನೋಡಿರುವ ಚಿರತೆ ತಕ್ಷಣವೇ ಅದರ ಮೇಲೆ ಹಾರಿದೆ. ಇದಕ್ಕೆ ಪ್ರತಿರೋಧ ನೀಡಲು ಮುಂದಾದ ಹೆಬ್ಬಾವು ಚಿರತೆಯನ್ನ ಕೆಳಗೆ ಕೆಡವಿ ಅದರ ಮೈಗೆ ಸುತ್ತಿಕೊಂಡಿದೆ. ಆದರೆ ಇದರಿಂದ ಚಿರತೆ ತಪ್ಪಿಸಿಕೊಂಡಿದೆ.ಇದೇ ವೇಳೆ ಚಿರತೆ ಹೆಬ್ಬಾವಿನ ಮೇಲೆ ದಾಳಿ ಮಾಡಿ ಅದರ ಮೈತುಂಬ ಗಾಯಗೊಳಿಸಿದೆ. ಈ ವಿಡಿಯೋ ಅಲ್ಲಿನ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಫುಲ್​ ವೈರಲ್​ ಆಗಿದ್ದು ತುಂಬಾ ಹೊತ್ತಿನ ತನಕ ಹೆಬ್ಬಾವು ಮತ್ತು ಚಿರತೆ ಪರಸ್ಪರ ಕಾಳಗಕ್ಕೆ ನಿಂತಿದ್ದವು. ಆದರೆ, ಕಡೆಯವರೆಗೂ ಹೋರಾಡಿದ್ದ ಚಿರತೆ ಹಾವಿನ ಬಿಗಿ ಹಿಡಿತದಿಂದ ತಪ್ಪಿಸಿಕೊಂಡು ಹೆಬ್ಬಾವನ್ನು ಕೊಲ್ಲುವುದರಲ್ಲಿ ಯಶಸ್ವಿಯಾಗಿತ್ತು.