Viral: ಮುಂದಿನ ಎರಡು ಕಾಲಿಲ್ಲದ ಆಕಳು ಮನುಷ್ಯನಂತೆ ಹೇಗೆ ನಡೆಯುತ್ತೆ ಗೊತ್ತಾ? ನೋಡಿ

ಮನುಷ್ಯರಂತೆ ಪ್ರಾಣಿಗಳಿಗೂ ಭಾವನೆಗಳು ಇವೆ.. ಅದೆಷ್ಟೋ ಬಾರಿ ಮನುಷ್ಯರಿಗಿಂತ ಹೆಚ್ಚಾಗಿ ಸಂಕಷ್ಟದಲ್ಲಿರುವವರಿಗೆ ಮಾತು ಬಾರದ ಮೂಕ ಪ್ರಾಣಿಗಳು ಸ್ಪಂದನೆ ಮಾಡುತ್ತವೆ. ತಮಗೆ ನೋವಾದಾಗ ಮನುಷ್ಯರಂತೆ ಅತ್ತು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತವೆ..ಯಾವ ಪ್ರಾಣಿಗಳ ಆದರೂ ಸಂಕಷ್ಟದಲ್ಲಿರುವುದನ್ನು ಕಂಡರೆ ತಮ್ಮ ಕೈಯಲ್ಲಿ ಆಗದಿದ್ದರೂ, ಓಡೋಡಿ ಕೈಚಾಚಿ ಸಹಾಯಹಸ್ತ ಮಾಡಲು ಮುಂದಾಗುತ್ತವೆ.. ಉದಾಹರಣೆಗೆ ಬದ್ಧ ವೈರಿಗಳಾದ ಬೆಕ್ಕು ಹಾಗೂ ನಾಯಿ ತಾವು ವೈರಿಗಳು ಎಂಬುದನ್ನು ಮರೆತು ಪರಸ್ಪರ ಮಾನವೀಯತೆ ಮೆರೆದ ಉದಾಹರಣೆ ಇವೆ.. ಮಾತುಬಾರದ ಹಸು ತನ್ನ ಮಗುವನ್ನು ಕಳೆದುಕೊಂಡಾಗ ವಾಹನದ ಹಿಂದೆ ಓಡೋಡಿ ಹೋಗಿ ತನ್ನ ಭಾವನೆಯನ್ನು ವ್ಯಕ್ತಪಡಿಸಿದ ಘಟನೆಯು ಇದೆ.

ಸಾಮಾನ್ಯವಾಗಿ ಮನೆಯ ಎಲ್ಲರೂ ಎಮ್ಮೆ ಯು ಮಂದಬುದ್ಧಿಯ ಪ್ರಾಣಿ ಎಂದು ಜರಿಯುತ್ತಾರೆ.. ಅದೇ ಬೈಯುವಾಗಲೂ ಎಮ್ಮೆಯ ಬುದ್ಧಿ ಇದೆಯಾ ಎಂದು ಸದಾ ಜರೆಯುತ್ತಲೇ ಇರುತ್ತಾರೆ..ಆದ್ರೆ ಎಲ್ಲರೂ ಅಂದುಕೊಂಡಂತೆ ಎಮ್ಮೆ ಮಂದಬುದ್ಧಿಯ ಪ್ರಾಣಿ ಅಲ್ಲ.. ಎಮ್ಮೆಗೂ ಕೂಡಾ ತನ್ನ ಬುದ್ಧಿ ಇದ್ದು, ಜನರ ಸಂಕಷ್ಟಕ್ಕೆ ಎಮ್ಮೆ ಸದಾ ನೆರವಾಗುತ್ತದೆ. ಅದೇ ರೀತಿ ಪ್ರಾಣಿಗಳು ತಮ್ಮ ಭಾವನೆಗಳನ್ನು,ಚೇಷ್ಟೆಗಳನ್ನು,ತಮ್ಮ ಚೈತನ್ಯ ವನ್ನು ಪ್ರಸ್ತುತ ಪಡಿಸುತ್ತ ಇರುತ್ತವೆ.ದೇವರು ಎಲ್ಲದಕ್ಕೂ ಲಿಂಕ್‌ ಮಾಡಿ ಕಳುಹಿಸಿರುತ್ತಾನೆ. ಯಾರಿಗೆ ಯಾರು ಜೋಡಿ ಅಂತ. ದೇವರು ಮಾನವರಿಗೂ, ಪ್ರಾಣಿಗಳಿಗೂ ಪ್ರೀತಿ, ಪ್ರೇಮ, ವಾತ್ಸಲ್ಯ, ವಯಸ್ಸನ್ನು ವರವಾಗಿ ನೀಡಿದ್ದಾನೆ.

ಹಸುಗೂಸವೊಂದು ಮನುಷ್ಯನಂತೆ ಎರಡು ಕಾಲುಗಳ ಮೇಲೆ ನಡೆಯುತ್ತಿರುವ ಮನಕಲಕುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ.ಮುದ್ದಾದ ಕರು ಆರೋಗ್ಯದಿಂದ ಇದೆ, ಮನುಷ್ಯರಂತೆ ಜಾನುವಾರುಗಳು ಈ ರೀತಿ ಅಂಗವೈಕಲ್ಯತೆಯಿಂದ ಜನಿಸಿಸುವುದು. ಸಾಮಾನ್ಯವಾಗಿದ್ದರು,ಕಾಲು ಇಲ್ಲದರಿವುದು ತೀರ ವಿರಳ ಎನ್ನಲಾಗುತ್ತದೆ.ಇಂಡೋನೇಷ್ಯಾದಲ್ಲಿ ಚಿತ್ರೀಕರಿಸಲಾದ ವೀಡಿಯೊ, ಕರು ತನ್ನ ಹಿಂಗಾಲುಗಳ ಮೇಲೆ ನಡೆದಾಡುದನ್ನು ತೋರಿಸುತ್ತದೆ, ಅದು ವ್ಯಕ್ತಿಯಷ್ಟೇ ಎತ್ತರವಾಗಿದೆ.ಅಷ್ಟೇ ಸಂತೋಷದಿಂದ ಕರು ತನ್ನ ಚೈತನ್ಯ ಇಟ್ಟುಕೊಂಡಿದೆ.

ಎರಡು ಮುಂಭಾಗದ ಕಾಲುಗಳನ್ನು ಕಳೆದುಕೊಂಡಿರುವ ಹಸು ನಿಯಂತ್ರಣ ತಪ್ಪಿದಂತೆ ತೋರುತ್ತಿದೆ, ಇಂಡೋನೇಷ್ಯಾದಲ್ಲಿ ಚಿತ್ರೀಕರಿಸಲಾದ ವೀಡಿಯೊ, ಕರು ತನ್ನ ಹಿಂಗಾಲುಗಳ ಮೇಲೆ ನಡೆದಾಡುದನ್ನು ತೋರಿಸುತ್ತದೆ, ಅದು ವ್ಯಕ್ತಿಯಷ್ಟೇ ಎತ್ತರವಾಗಿದೆ. ಹಸು ನಿಲ್ಲಲು ಪ್ರಯತ್ನಿಸುತ್ತದೆ.2017 ರ ಕೊನೆಯಲ್ಲಿ ವೈರಲ್ ಆದ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ತ್ವರಿತವಾಗಿ ನೋಡಿದ್ದಾರೆ. ಲೂಯಿಸ್ ಥಾಮಸ್ ಕಾಮೆಂಟ್ ಮಾಡಿದ್ದಾರೆ. ಯಾರೂ ಸಹಾಯ ಮಾಡುವುದಿಲ್ಲವೇ? ನಾವು ಅಂತಹ ಸ್ವ-ಕೇಂದ್ರಿತ ಪರಿಸರದಲ್ಲಿ ವಾಸಿಸುತ್ತೇವೆ. ‘ಈ ಬಡ ಪ್ರಾಣಿಯನ್ನು ಎಂದು ಕೇಳಿದ್ದಾರೆ..ಈ ದೃಶ್ಯ ಮಾತ್ರ ನೋಡಿದಾಗ ಮನ ಕುಲುಕಿಸುತ್ತೆ.