Video: ಕೊಂಬೆಯಲ್ಲಿ ಅಡಗಿ ಕುಳಿತ ಹೆಬ್ಬಾವನ್ನು ಒಬ್ಬನೇ ಹಿಡಿಯಲು ಹೋದಾಗ ಏನಾಯ್ತು ನೋಡಿ, ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ದೊಡ್ದವರೇ ಆಗಲಿ ಅಥವಾ ಚಿಕ್ಕವರೇ ಆಗಲಿ ಜನ ಹಾವಿಗೆ ತುಂಬಾ ಹೆದರುತ್ತಾರೆ, ಆದರೆ ಕೆಲವರು ಹಾವನ್ನು ತಮ್ಮ ಕೈಯಲ್ಲಿ ಹಿಡಿಯುತ್ತಾರೆ ಮತ್ತು ಅದನ್ನು ಕೊರಳಿಗೆ ಕೂಡ ಹಾಕಿಕೊಳ್ಳುತ್ತಾರೆ. ಅವರು ಯಾವುದೇ ಭಯವಿಲ್ಲದೆ ಹಿಡಿದುಕೊಳ್ಳುತ್ತಾ. ಹಾಗೆ ನೋಡಿದರೆ ಬಹುತೇಕ ಎಲ್ಲಾ ಪ್ರಜಾತಿಯ ಹಾವುಗಳು ತುಂಬಾ ಅಪಾಯಕಾರಿಯಾಗಿರುತ್ತವೆ, ಆದರೆ ಕೆಲವು ವಿಷಕಾರಿಯಲ್ಲ ಎಂದೂ ಕೂಡ ಹೇಳಲಾಗುತ್ತದೆ.

ಕಿಂಗ್ ಕೋಬ್ರಾ ಅಥವಾ ಕಾಳಿಂಗ ಸರ್ಪ ಎಲ್ಲಾ ಹಾವುಗಳ ಪ್ರಜಾತಿಯಲ್ಲಿ ಅತ್ಯಂತ ಅಪಾಯಕಾರಿಯಾಗಿದೆ, ಇದರ ಕಚ್ಚುವಿಕೆಯು ಯಾವುದೇ ವ್ಯಕ್ತಿಯ ಉಸಿರನ್ನು ಕೆಲವೇ ನಿಮಿಷಗಳಲ್ಲಿ ನಿಲ್ಲಿಸಿಬಿಡುತ್ತದೆ. ಇಂತಹ ಹಾವುಗಳಿಂದ ಜನರು ದೂರವಿರಲು ಬಯಸುತ್ತಾರೆ. ಹೆಬ್ಬಾವಿನ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಹಾವುಗಳೆಂದರೆ ಭಯಪಡದ ಅನೇಕ ಜನರಿದ್ದಾರೆ. ಅಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಅಪಾಯಕಾರಿ ಹೆಬ್ಬಾವನ್ನು ಹಿಡಿಯಲು  ಪ್ರಯತ್ನಿಸುತ್ತಿರುವುದನ್ನು ನೀವು ಗಮನಿಸಬಹುದು. ಹೌದು, ನಂಬಲಸಾಧ್ಯವಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಾಣಿಗಳು ಚಿಕ್ಕ ಪ್ರಾಣಿಗಳನ್ನು ಕೆಣುಕುವುದನ್ನು ನೋಡುತ್ತಿರುತ್ತೇವೆ.  ಅದರಲ್ಲೂ ಈ ಗಾಢ ನಿದ್ರೆಯಲ್ಲಿರುವಂತಹ ಪ್ರಾಣಿಗಳನ್ನು ಎಬ್ಬಿಸುವುದು ಒಂದೇ, ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದು ಸಹ ಒಂದೇ. ಹೇಗೆ ಅಂತ ನೀವು ಕೇಳಬಹುದು, ಹೆಬ್ಬಾವಿನ ಬಗ್ಗೆ ತರತರದ ವೀಡಿಯೋ ನಮಗೆ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತದೆ. ಹೆಬ್ಬಾವು ಒಂದು ಹಿಂಸ್ರ ಜಂತುವಾಗಿ­ರುವುದರ ಜೊತೆಗೆ ಅನಿರೀಕ್ಷಿತ ಹಿಂಸೆಯ ಭೀತಿಯ ಒಂದು ನಿಶಾನೆಯಾಗಿಯೂ ಇದೆ.ಆದ್ದರಿಂದಲೇ ಕಾವ್ಯ ಪುರಾಣಗಳಲ್ಲಿ ಮತ್ತೆ ಮತ್ತೆ ಬರುತ್ತಿರುತ್ತದೆ. ದೇವರ ದಾಸಿಮಯ್ಯನ ವಚನದಲ್ಲಿ ‘ಹಸಿವೆಯೆಂಬ ಹೆಬ್ಬಾವು ಬಂದು ನುಂಗಿದೊಡೆ ಆಪಾದಮಸ್ತಕ ವಿಷವೇರಿತ್ತಲ್ಲಾ’ ಎಂದಿದೆ. ಬಸವಣ್ಣನ ವಚನದಲ್ಲಿ ‘ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಲ್ಲಾ’ ಎಂಬ ಮಾತಿದೆ. ಇವೆರಡೂ ನೈಜ ಹೆಬ್ಬಾವಿನ ವರ್ಣನೆ­ಗಳಲ್ಲ.

ಹೆಬ್ಬಾವು ನುಂಗಿದಾಗ ಶರೀರ ವಿಷವೇರು­ವುದಿಲ್ಲ. ಶರೀರವೇ ಗಾಯಬ್ಬು. ಬಸವಣ್ಣನ ಸಾಲಿ­ನಲ್ಲಿ ಸಂಸಾರವನ್ನು ರಾಹುವಿಗೆ ಮತ್ತು ಹೆಬ್ಬಾವಿಗೆ ಸಮೀಕರಿಸಲಾಗಿದೆ. ಆದಿಮ ಅಂಧ­ಕಾರದ ಶಕ್ತಿಯೊಂದು ನೆ ಮ್ಮನ್ನು ನುಂಗಿಹಾಕಿದ ಭಯಾನಕ ಅನುಭವ ಇಂಥ ಕಡೆಗಳಲ್ಲಿ ಧ್ವನಿತ­ವಾಗಿದೆ. ಹಾವು ಮತ್ತು ಹೆಬ್ಬಾವುಗಳ ಭಿನ್ನತೆ ಕಾವ್ಯ ಮತ್ತು ದಂತ ಕತೆಗಳಲ್ಲಿ ಅಳಿಸಿಹೋಗು­ತ್ತಿರುತ್ತದೆ. ಎರಡೂ ಅನಿರೀಕ್ಷಿತ ಅಪಾಯಗಳ ಸಂಕೇತಗಳು. ಹಾವುಗಳ ಹಗೆಯ ಕತೆಗಳು ಹಲವಾರು. ಮಹಾಭಾರತದಲ್ಲಿ ಬರುವ ತಕ್ಷಕನ ಕತೆಯನ್ನು ಗಮನಿಸಬಹುದು.ಆದರೆ ಇಲೊಬ್ಬರು ಹೆಬ್ಬಾವು ಹಿಡಿಯಲು ಹಾರಸಾಹಸ ಪಡುವ ವಿಡಿಯೋ ಸೊಷಿಯಲ್ ಮೀಡಿಯಾ ದಲ್ಲಿ ಸಖತ್ ವೈರಲ್ ಆಗುತ್ತಿದೆ.

 

 

View this post on Instagram

 

A post shared by Mike Holston (@therealtarzann)