Video: ನಡುರಸ್ತೆಯಲ್ಲಿ ವಾಹನಗಳಿಗೆ ಅಡ್ಡಬಂದ ದೈತ್ಯಾಕಾರದ ಹೆಬ್ಬಾವು, ಮುಂದೇನಾಯ್ತು ನೋಡಿ.. ವಿಡಿಯೋ

ಸೃಷ್ಟಿಯಲ್ಲಿರುವ ಪ್ರತಿಯೊಂದು ಜೀವಿಯೂ ವಿಭಿನ್ನವಾಗಿದೆ. ಸೃಷ್ಟಿಯ ಒಳಹೊಕ್ಕಾಗ ಸೃಷ್ಟಿಯ ಪ್ರತಿಯೊಂದು ಜೀವಿಯೂ ಬೇಕೇ ಬೇಕು. ಅಷ್ಟೇ ಅಲ್ಲದೇ, ಪ್ರತಿಯೊಂದು ಜೀವಿಯ ಆಕಾರ, ಗಾತ್ರ, ಬಣ್ಣ ಹಾಗೂ ಬದುಕುವ ರೀತಿಯೂ ವಿಭಿನ್ನತೆವಾಗಿವೆ. ಈ ಜೀವ ಜಗತ್ತಿನಲ್ಲಿ ಕ್ರಿಮಿ ಕೀಟಗಳಿಂದ ಹಿಡಿದು ದೈತ್ಯ ಗಾತ್ರದ ಜೀವಿಗಳು ಕೂಡ ಇಲ್ಲಿವೆ. ಆದರೆ ಎಲ್ಲಾ ಜೀವಿಗಳು ಕೂಡ ತಮ್ಮ ಬದುಕುವುದಕ್ಕಾಗಿ ಹರಸಾಹಸ ಪಡುತ್ತದೆ. ಪ್ರಕೃತಿ ಒಂದಷ್ಟು ರೂಪುರೇಷೆಯನ್ನು ಹಾಕಿದೆ, ಇಂತಹ ಜೀವಿಗಳು ಇಲ್ಲೇ ವಾಸಿಸಬೇಕು. ಸೃಷ್ಟಿಯೂ ಹಾಕಿದ ನಿಯಮವನ್ನು ಯಾರಿದಂದಲೂ ಬದಲಾಯಿಸಲು ಸಾಧ್ಯವೇ ಇಲ್ಲ. ಈ ಜೀವಿ ಇನ್ನೊಂದು ಜೀವಿಯನ್ನು ತಿಂದು ಬದುಕಲೇ ಬೇಕು.

ಸಾಮಾನ್ಯವಾಗಿ ಈ ಹಾವುಗಳಲ್ಲಿಯೂ ಪಾಪದ ಜೀವಿಗಳು ಇವೆ. ಸುಮಾರು 15 ಕುಟುಂಬಕ್ಕೆ ಸೇರಿದ 2900ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಈ ಹಾವುಗಳು ಅಂಟಾರ್ಟಿಕವನ್ನು ಹೊರತುಪಡಿಸಿ, ಉಳಿದ ಎಲ್ಲಾ ಖಂಡಗಳಲ್ಲಿಯೂ, ಸಮುದ್ರಗಳಲ್ಲಿ ಹಾಗೂ 16000 ಅಡಿ ಎತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಕೂಡಾ ಹಾವು ಜೀವಿಸುತ್ತದೆ ಎನ್ನುವುದು ಬಹುತೇಕ ಜನರಿಗೆ ತಿಳಿದಿಲ್ಲ. ಅಂದಹಾಗೆ, ಈ ಹಾವು ಎಂದರೆ ಒಂದು ಕ್ಷಣ ಮೈ ನಡುಗುತ್ತೆ. ಹಾವಿನ ಹೆಸರು ಹೇಳುತ್ತಿದ್ದಂತೆ ರೋಮಗಳು ನೆಟ್ಟಗಾಗುತ್ತವೆ. ಮುಖ ಬೆವರುವುದಕ್ಕೆ ಶುರುವಾಗುತ್ತದೆ. ದೂರದಿಂದಲೇ ಹಾವು ಕಣ್ಣಿಗೆ ಬಿದ್ದರೆ ಸಾಕು ಭಯಕ್ಕೆ ಓಡುವುದು ಸಹಜ.

ಅದರಲ್ಲೂ ಹೆಬ್ಬಾವು ಎಂದರೆ ಸುಮ್ಮನೇನಾ ಆ ಕಡೆಗೆ ತಲೆ ಕೂಡ ಹಾಕುವುದಿಲ್ಲ. ಉದ್ದನೆಯ ದಪ್ಪವಾದ ಹೆಬ್ಬಾವು ಕಂಡರೆ, ಒಂದು ಕ್ಷಣ ಮೈ ನಡುಕ ಉಂಟಾಗುತ್ತದೆ. ಇನ್ನು ಹೆಬ್ಬಾವನ್ನು ರಕ್ಷಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಹೆಬ್ಬಾವುವೊಂದು ರಸ್ತೆ ದಾಟುತ್ತಿದೆ. ಈ ಘಟನೆಯೂ ಬ್ರೆಜಿಲ್ ನಲ್ಲಿ ನಡೆದಿದೆ. ಈ ವಿಡಿಯೋದಲ್ಲಿ ರಸ್ತೆಯಲ್ಲಿ ವಾಹನ ದಟ್ಟಣೆ ಇರುತ್ತದೆ. ಈ ಹೆಬ್ಬಾವನ್ನು ನೋಡಿದ ವಾಹನ ಸವಾರರು ರಸ್ತೆ ದಾಟುವವರೆಗೆ ವಾಹನಗಳನ್ನು ನಿಲ್ಲಿಸಿದ್ದಾರೆ. ಈ ದೃಶ್ಯವನ್ನು ಅಲ್ಲಿನ ಸ್ಥಳೀಯರು ಸೆರೆ ಹಿಡಿದಿದ್ದು, ಈ ವೀಡಿಯೊದಲ್ಲಿ ಭಾರಿ ಗಾತ್ರದ ಹಾವೊಂದು ರಸ್ತೆ ಮಧ್ಯದಲ್ಲಿ ತೆವಳುತ್ತಾ ರಸ್ತೆ ದಾಟುತ್ತಿದೆ. ಈ ಹೆಬ್ಬಾವು ರಸ್ತೆ ದಾಟುತ್ತಿರುವುದನ್ನು ನೋಡಲು ಈ ಕೆಳಗಿನ ವಿಡಿಯೋ ನೋಡಿ.