Video: ತನ್ನ ಮೇಲೆ ದಾಳಿ ಮಾಡಲು ಬಂದ ಹದ್ದಿಗೆ ತಕ್ಕ ಪಾಠ ಕಲಿಸಿದ ಹಾವು… ಕಾದಾಟದ ವಿಡಿಯೋ ನೋಡಿ

ಇಂಟರ್ನೆಟ್ ನಲ್ಲಿ ಲಕ್ಷಾಂತರ ವೀಡಿಯೊಗಳು ಬರುತ್ತಿರುತ್ತವೆ. ಕೆಲವು ವಿಡಿಯೋಗಳು ಆಶ್ಚರ್ಯವನ್ನು ಉಂಟು ಮಾಡಿದರೆ ಇನ್ನು ಕೆಲವು ವಿಡಿಯೋಗಳು ಭಯಾನಕವಾಗಿರುತ್ತವೆ. ಮತ್ತೊಂದೆಡೆ, ಕೆಲವು ವಿಡಿಯೋಗಳನ್ನು ನೋಡಿದರೆ ನಗು ತಡೆಯುವುದಿಲ್ಲ ,ಕೆಲವೊಂದು ವಿಡಿಯೋಗಳು ಸಂಕಟ ವೆನಿಸುತ್ತವೆ. ಇಂಥಹ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿರುತ್ತವೆ. ಅಂಥದ್ದೇ ವಿಡಿಯೋವನ್ನು ಇಲ್ಲಿ ಕೂಡಾ ಕಾಣಬಹುದು. ಈ ವೀಡಿಯೊ ಹಾವು ಮತ್ತು ಹದ್ದಿಗೆ ಸಂಬಂಧಿಸಿದ ವಿಡಿಯೋವಾಗಿದೆ. ಇದನ್ನು ಸಾಮಾಜಿಕ ಮಾಧ್ಯಮದ ಬೇರೆ ಬೇರೆ ಮಾಧ್ಯಮದಲ್ಲಿ ಸಾವಿರಾರು ಬಾರಿ ವೀಕ್ಷಿಸಲಾಗಿದೆ.ಹಾವು ಮತ್ತು ಹದ್ದು ನಾ ಮುಂದು ತಾ ಮುಂದು ಎಂದು ಹೋರಾಟ ಮಾಡುತ್ತಿವೆ.

ಹದ್ದು ಬೇಟೆಯಾಡುವ ಪಕ್ಷಿ. ಅದರ ತೆಳುವಾದ ರೆಕ್ಕೆಗಳು ಅತಿ ವೇಗದಲ್ಲಿ ಹಾರುವುದಕ್ಕೆ ಅದಕ್ಕೆ ಸಹಾಯ ಮಾಡುತ್ತದೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನ ಸಮೀಕ್ಷೆಯ ಪ್ರಕಾರ, ಹದ್ದು ವಿಶ್ವದ 10 ವೇಗದ ಪ್ರಾಣಿಗಳ ವರ್ಗಕ್ಕೆ ಸೇರಿದೆ. ಹದ್ದು ಗಂಟೆಗೆ 320 ಕಿಲೋಮೀಟರ್‌ಗಿಂತ ಹೆಚ್ಚು ವೇಗದಲ್ಲಿ ಹಾರಬಲ್ಲದು. ಹದ್ದು ಆಕಾಶದಲ್ಲಿ ಮಾತ್ರವಲ್ಲ, ಭೂಮಿಯ ಮೇಲಿನ ಅತ್ಯಂತ ವೇಗದ ಪಕ್ಷಿಯಾಗಿದೆ.

ಆಕಾಶದಲ್ಲಿ ಹಾರುತ್ತಿರುವಾಗಲೇ ಹದ್ದು ತನ್ನ ಬೇಟೆಯನ್ನು ಗುರಿಯಾಗಿಸಿಕೊಳ್ಳುತ್ತದೆ. ಅತಿ ಸೂಕ್ಷ್ಮ ದೃಷ್ಟಿಯನ್ನು ಹೊಂದಿರುವ ಹದ್ದು, ಒಮ್ಮೆ ಗುರಿಯಿಟ್ಟಿತೆಂದರೆ ಬೇಟೆಯ ಕತೆ ಮುಗಿಯಿತು ಎಂದೇ ಅರ್ಥ. ಹಾವು ಕಂಡರಂತು ಹದ್ದುಗಳು ಕೂಡಲೇ ಬರುತ್ತವೆ.ಸಾವಿರಾರು ಮೀಟರ್ ಎತ್ತರದಿಂದಲೇ ತನ್ನ ಬೇಟೆಯನ್ನು ಗುರುತಿಸುವ ಈ ಪಕ್ಷಿ ಬೇಟೆಗೆ ತಪ್ಪಿಸಿಕೊಳ್ಳುವ ಕಿಂಚಿತ್ತೂ ಅವಕಾಶ ನೀಡುವುದಿಲ್ಲ. ಕ್ಷಣ ಮಾತ್ರದಲ್ಲಿ ಹರಿ ಬಂದು ಬೇಟೆ ಮೇಲೆ ಮಾರಣಾಂತಿಕ ದಾಳಿ ನಡೆಸಿ ಬಿಡುತ್ತದೆ.ಇತ್ತೀಚಿನ ದಿನಗಳಲ್ಲಿ ಹದ್ದಿನ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಅಪಾಯಕಾರಿ ಹಾವನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು. ಹದ್ದು ತನ್ನ ಮೊನಚಾದ ಉಗುರುಗಳಿಂದ ಹಾವನ್ನು ಒತ್ತಿ ಹಿಡಿದು ತನ್ನ ಕೊಕ್ಕಿನಿಂದ ಕುಕ್ಕುತ್ತಿರುವುದನ್ನು ಕಾಣಬಹುದು.

ಅಪಯಕಾರಿ ಹಾವನ್ನು ಹದ್ದು ತನ್ನ ಉಗುರುಗಳಿಂದ ಹಿಡಿದಿತಟ್ಟಿರುವುದನ್ನು ಇಲ್ಲಿ ಕಾಣಬಹುದು. ಇಷ್ಟಿದ್ದರೂ ಹಾವು ಕೂಡಾ ತನ್ನ ಬಾಯಿ ತೆರೆದು ಹದ್ದಿನ ಮೇಲೆ ದಾಳಿ ಮಾಡಲು ಯತ್ನಿಸುತ್ತದೆ. ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆ. ಹದ್ದು ನಿರಂತರವಾಗಿ ದಾಳಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವು ಕೊನೆಯುಸಿರಿನವರೆಗೂ ಹದ್ದಿನ ಜೊತೆ ಹೋರಾಡುತ್ತದೆ.