Video: ಕೈಗೆ ಸಿಗದ ಕಾಡುಹಂದಿಗೆ ಹಿಡಿಯಲು ಈತ ಮಾಡಿದ ಉಪಾಯ ಹೇಗಿತ್ತು, ಕೊನೆಗೆ ಆಗಿದ್ದೆ ಬೇರೆ ನೋಡಿ… ವಿಡಿಯೋ

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಸಖತ್ ಸೌಂಡ್ ಮಾಡುತ್ತಿದೆ. ಪ್ರಾಣಿಗಳ ಜಗತ್ತಿನ ಅಪರೂಪದ ದೃಶ್ಯಗಳನ್ನು ನೋಡಲು ಯಾರಿಗೆ ಇಷ್ಟ ಇಲ್ಲ ಹೇಳಿ…? ಎಲ್ಲರಿಗೂ ಇಂತಹ ದೃಶ್ಯಗಳನ್ನು ನೋಡುವುದೆಂದರೆ ಬಲು ಇಷ್ಟ. ಅದರಲ್ಲೂ ಪ್ರಾಣಿಗಳ ದೃಶ್ಯಗಳನ್ನು ಎಲ್ಲರೂ ಬಲು ಆಸಕ್ತಿಯಿಂದಲೇ ಕಣ್ತುಂಬಿಕೊಳ್ಳುತ್ತಾರೆ. ಇಂತಹ ದೃಶ್ಯಗಳು ಬಹುಬೇಗ ಮನಸ್ಸಿಗೆ ಆನಂದವನ್ನೂ ನೀಡುತ್ತದೆ. ಇದೀಗ ಅದರ ಬೆನ್ನಲ್ಲೆ ಸುಲಭವಾಗಿ ಹಂದಿ‌ ಹಿಡಿಯುವ ವೀಡಿಯೋ ವೈರಲ್ ಆಗಿದೆ. ಬಹುತೇಕ ಹಳ್ಳಿಗಳಲ್ಲಿ ಊರ ಹತ್ತಿರದಲ್ಲಿ ಕಾಡು ಪ್ರದೇಶ ಇರುವ ಪ್ರದೇಶಗಳಲ್ಲಿ ಈ ಶಿಖಾರಿ -ಭೇಟೆ ಮಾಮೂಲಿ ವಿಷ್ಯ ಅದು ವಾರದ ಕೊನೆಯಲ್ಲಿ ಹಬ್ಬ ಬಣ್ಣದ ಹೋಳಿ ಹಬ್ಬಗಳ ಸಂದರ್ಭದಲ್ಲಿ ಸಾಮಾನ್ಯ.

ತೇಜಸ್ವಿಯವರ ಸಾಹಿತ್ಯದಲ್ಲಂತೂ ಕಾಡು ಹಂದಿ ಪಾತ್ರ, ಮಾಂಸ, ರುಚಿ, ವಾಸನೆಯಾಗಿ ಅಲ್ಲಲ್ಲಿ ಕಂಡು ಬರುತ್ತದೆ. ಮಲೆನಾಡಿನ ಹಂದಿಗಳು ನಿರುಪದ್ರವಿಗಳು ಎನ್ನುತ್ತಾರೆ ಆದರೆ, ಹಂದಿಯ ಗಟ್ಟಿತನ, ಸಿಟ್ಟು, ಹುಂಬತನ ಅದನ್ನು ನೋಡಿದವರಿಗೇ ಗೊತ್ತು. ಹಂದಿ ಸೋಯಿಬೇಟೆ, ಬಲೆಬೇಟೆ ಹಿಂದೆ ಮರೆಯದ ಮನರಂಜನೆ ಈಗ ಇತಿಹಾಸ. ಈಗ ಕಾಡು ಹಂದಿ ಸೇರಿದಂತೆ ವನ್ಯ ಮೃಗಗಳ ಬೇಟೆ ನಿಷಿದ್ಧ ಹಾಗಾಗಿ ಕಾಡು ಹಂದಿ ಈಗ ಉಪದ್ರವಿಯಾಗಿ ಬದಲಾಗಿದೆ.ಶಿಖಾರಿ ಬೇಟೆ ಆಡಿ ನಾಲಗೆ ರುಚಿ ಸಹಿಸಲು ಆಗದೆ ಅಲ್ಲಿಯೇ ಬೆಂಕಿ ಹಾಕಿ ಖಾರ ಉಪ್ಪು ಹಚ್ಚಿ ಕಾಯಿಸಿ ಬೇಯಿಸಿ ತಿಂದು ಬರುವವರೂ ಇದ್ದರು.ಹಾಗೆ ಎಲ್ಲರೂ ಸಾಮೂಹಿಕವಾಗಿ ಒಗ್ಗಟ್ಟಿನ ಪ್ರಯತ್ನ ಮಾಡಿ ಸಂಹಾರ ಮಾಡಿದ ಪ್ರಾಣಿಗಳನ್ನು ಒಟ್ಟಿಗೆ ಹಾಕಿ ಪಾಲು ಮಾಡಿ ಹಂಚುತ್ತಿದ್ದುದು ವಾಡಿಕೆ,ಆದರೆ ಕೆಲವೊಮ್ಮೆ ಕೆಲ ಬಕಾಸುರರು ತಮ್ಮ ನಾಲಗೆ ರುಚಿ ಸಹಿಸಿಕೊಳ್ಳಲು ಆಗದೆ ಕೆಲ ಪ್ರಾಣಿಗಳನ್ನು ಗುಟ್ಟಾಗಿ ಬೇರೆಯವರಿಗೆ ಗೊತ್ತಾಗದ ಹಾಗೆ ಬೇಯಿಸಿ ಕಾಯಿಸಿ ತಿಂದು ತೇಗುತ್ತಿದ್ದುದೂ ಉಂಟು.

ಒಂದು ಕಾಡು ಹಂದಿಬೇರೂರಿರುವ ದೇಹವನ್ನು ಹೊಂದಿದೆ, ಅದರ ಉದ್ದವು ಒಂದೂವರೆ ಮೀಟರ್ ವರೆಗೆ ಇರುತ್ತದೆ. ದೇಹದ ಎತ್ತರವು ಸಾಮಾನ್ಯವಾಗಿ 1 ಮೀಟರ್ ತಲುಪುತ್ತದೆ. ಪ್ರಬುದ್ಧ ಕಾಡುಹಂದಿಯ ತೂಕ 60 ರಿಂದ 300 ಕೆಜಿ ವರೆಗೆ ಇರುತ್ತದೆ.ಮೊದಲನೆಯದಾಗಿ, ಇದು ಸಸ್ಯಗಳು, ಅಂದರೆ ಬೇರುಗಳು, ಗೆಡ್ಡೆಗಳು, ಬೀಜಗಳು, ಹಣ್ಣುಗಳನ್ನು‌ ತಿನ್ನುತ್ತವೆ.ಕಿವಿಗಳು ಅಗಲ ಮತ್ತು ಎತ್ತರದಲ್ಲಿ ಸಾಕಷ್ಟು ದೊಡ್ಡದಾಗಿದ್ದು ‌ ಮೂತಿ ಒಂದು ಹೀಲ್ನೊಂದಿಗೆ ಕೊನೆಗೊಳ್ಳುತ್ತದೆ, ಇದು ವಿಭಿನ್ನ ಗಾತ್ರಗಳನ್ನು ಹೊಂದಿರುತ್ತದೆ. ಇದೀಗ ಇಲ್ಲಿ ಹಂದಿ ಹಿಡಿಯುವ ವಿಡಿಯೊಆಸಕ್ತಿದಾಯಕವಾಗಿದೆ.ಅದಕ್ಕೆ ಕೋಲು‌,ನೂಲು ಟಿನ್ ಸಣ್ಣ ಸರಳಿನ ಸಹಾಯ ಪಡೆಯಲಾಗಿದೆ. ಬಳಿಕ ಹಂದಿ ಸಹ ಸಿಕ್ಕಿ ಹಾಕಿ ಕೊಳ್ಳುತ್ತದೆ.ಹಂದಿ ಬರುವ ಸ್ಥಳಕ್ಕೆ ತರಗೆಲೆ ಗಳನ್ನು ಮುಚ್ಚಿ ಒಂದು ಕಡೆ ಜಾಗವನ್ನು ನಿರ್ಧರಿಸಿ ಮಣ್ಣನ್ನು ಅಗೆದು ಹಂದಿ ಆ ಹಗ್ಗದೊಳಗೆ ಸಿಕ್ಕಿ ಹಾಕಿ ಕೊಳ್ಳುವಂತೆ ಮಾಡುವ ವಿಧಾನ ಫೇಮಸ್ ಆಗಿದೆ.