Video: ಮನೆಯ ಮಲಗುವ ಕೋಣೆಯಲ್ಲಿ ಹೆಡೆಯೆತ್ತಿ ನಿಂತ ಹಾವೂ ಮಾಡಿದ್ದೇನು ನೋಡಿ, ವಿಡಿಯೋ

ಸೃಷ್ಟಿಯೊಳಗೆ ಇರುವ ಪ್ರತಿಯೊಂದು ಜೀವಿಯೂ ಅದ್ಭುತವೇ. ಹೌದು ಯಾವುದೇ ಜೀವಿಯ ಸೃಷ್ಟಿಯಾಗಿದ್ರು ಅದಕ್ಕೆ ಒಂದಲ್ಲ ಒಂದು ಕಾರಣವು ಇದ್ದೆ ಇದೆ. ಸೃಷ್ಟಿಯೊಳಗಿನ ಜೀವಿಗಳಲ್ಲಿ ಸರೀಸೃಪಗಳ ಸಾಲಿಗೆ ಸೇರುವ ಹಾವುಗಳು ಕೂಡ ಒಂದು. ಸಾಮಾನ್ಯವಾಗಿ ವಿಧ ವಿಧದ ಹಾವುಗಳನ್ನು ನಾವು ಕಾಣುತ್ತೇವೆ. ಎಲ್ಲರಿಗೂ ಗೊತ್ತಿರುವ ಹಾವುಗಳು, ನಾಗರಹಾವು, ಹೆಬ್ಬಾವು, ಕೇರೆ ಹಾವು, ಕನ್ನಡಿ ಹಾವು ಹಸಿರು ಹಾವು, ಈ ಹಾವುಗಳ ಪರಿಚಯವಿರುತ್ತದೆ. ಆದರೆ ಭಯಾನಕ ಹಾವುಗಳ ಸೇರಿದ್ದು ನಾಗರ ಹಾವು. ಈ ಹಾವಿನ ಹೆಸರು ಕೇಳಿದರೆ ಸಾಕು ಒಂದು ಕ್ಷಣ ಭಯ ಪಡುತ್ತೇವೆ. ಇಂತಹ ಹಾವುಗಳು ಎದುರಿಗೆ ಬಂದರೆ ಕೇಳಬೇಕೇ, ಅನೇಕರು ಓಡಲು ಶುರು ಮಾಡುತ್ತಾರೆ. ಈ ನಾಗರಹಾವುಗಳು ಕೆಲವೊಮ್ಮೆ ಮನೆಯ ಒಳಗೂ ಕಾಣ ಸಿಗುತ್ತವೆ. ಇಲ್ಲೊಂದು ಮನೆಯ ಮಲಗುವ ಕೋಣೆಯಲ್ಲಿ ನಾಗರ ಹಾವೊಂದು ಎಡೆಯೆತ್ತಿ ನಿಂತಿದೆ. ಹಾಗಾದರೆ ಮುಂದೇನಾಯ್ತು ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಆದರೆ ಸರಿ ಸುಮಾರು 15 ಕುಟುಂಬಕ್ಕೆ ಸೇರಿದ 2900ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಈ ಹಾವುಗಳು ಅಂಟಾರ್ಟಿಕವನ್ನು ಹೊರತುಪಡಿಸಿ, ಉಳಿದ ಎಲ್ಲಾ ಖಂಡಗಳಲ್ಲಿಯೂ, ಸಮುದ್ರಗಳಲ್ಲಿ ಹಾಗೂ 16000 ಅಡಿ ಎತ್ತರವಿರುವ ಪ್ರದೇಶಗಳಲ್ಲಿ ಕಾಣಸಿಗುತ್ತವೆ. ಸಾಮಾನ್ಯವಾಗಿ ಈ ಹಾವುಗಳನ್ನು ಎರಡು ವಿಧವಾಗಿ ವಿಂಗಡಣೆ ಮಾಡಲಾಗಿದೆ. ಈ ವಿಷಕಾರಿ ಹಾವುಗಳಿಗಿಂತ, ವಿಷರಹಿತ ಹಾವುಗಳ ಪ್ರಭೇದಗಳ ಸಂಖ್ಯೆಯೇ ಹೆಚ್ಚಾಗಿದೆ. ಭಾರತ ದೇಶದಲ್ಲಿಯೇ, ಇದುವರೆಗೆ ಸುಮಾರು 275 ಹಾವಿನ ಪ್ರಭೇದಗಳಲ್ಲಿ, ಸುಮಾರು 60 ಪ್ರಭೇದಗಳು ಮಾತ್ರ ವಿಷಕಾರಿಯಾಗಿದೆ, ಆದರೆ ನೋಡುವುದಕ್ಕೆ ಒಂದೇ ತರಹ ಕಾಣುತ್ತದೆ. ಭಾರತದಲ್ಲಿ ಕಂಡುಬರುವ ಹಾವುಗಳಲ್ಲಿ ಅನೇಕ ವಿಧಗಳಿವೆ, ಅವುಗಳಲ್ಲಿ ವಿಷಕಾರಿ ಹಾವುಗಳು ಮತ್ತು ವಿಷಕಾರಿ ಅಲ್ಲದ ಹಾವುಗಳು ಎಂದು ಎರಡು ವಿಧಗಳನ್ನು ಮಾಡಲಾಗಿದೆ. ಈ ವಿಷಕಾರಿ ಹಾವುಗಳಲ್ಲಿ ಎರಡು ವಿಷಗಳಿವೆ. ಅವುಗಳಲ್ಲಿ ಮೊದಲನೆಯದು ವಿಷಕಾರಿ ಹಾವುಗಳು ಮತ್ತು ಎರಡನೆಯದು ಅಲ್ಪ ವಿಷಕಾರಿ ಹಾವುಗಳು. ವಿಷಕಾರಿ ಹಾವುಗಳು ಮನುಷ್ಯರಿಗೆ ಕಚ್ಚಿದ್ದಲ್ಲಿ ಸಾವು ಸಂಭವಿಸಬಹುದು.

ನಾಗರ ಹಾವು ಎಂದರೆ ಮೊದಲು ನೆನಪಾಗುವುದು ವಿಷ ತುಂಬಿದ ಹಲ್ಲುಗಳು. ಈ ನಾಗರ ಹಾವುಗಳಿಗೆ ನಾಲ್ಕು ವಿಷಕಾರಿ ಹಲ್ಲುಗಳಿವೆ. ಅವರ 4 ವಿಷಪೂರಿತ ಹಲ್ಲುಗಳು ಸಹ ವಿಭಿನ್ನ ಪರಿಣಾಮಗಳನ್ನು ಹೊಂದಿವೆ. ನಾಗರ ಹಾವುಗಳು ಬರೋಬ್ಬರಿ 32 ಹಲ್ಲುಗಳನ್ನು ಹೊಂದಿರುತ್ತದೆ. ಆದರೆ ಇವುಗಳಲ್ಲಿ ನಾಲ್ಕು ಹಲ್ಲುಗಳು ವಿಷಪೂರಿತವಾಗಿವೆ. ಈ 4 ವಿಷಪೂರಿತ ಹಲ್ಲುಗಳನ್ನು ಮಕರೀ, ಕರಾಳಿ, ಕಾಳರಾತ್ರಿ ಮತ್ತು ಯಮದೂತೀ ಎಂದು ಕರೆಯಲಾಗುತ್ತದೆ. ಈ ಹಲ್ಲುಗಳಲ್ಲಿ ಚಿಕ್ಕದು ನಪುಂಸಕ. ಈ ಹಲ್ಲಿನಿಂದ ಕಚ್ಚಿದ ನಾಗರಹಾವುಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ. ಅಕಾಲಿಕವಾಗಿ ಜನ್ಮ ನೀಡುವ ಹಾವು ಪ್ರಮಾಣಾನುಗುಣವಾಗಿ ಕಡಿಮೆ ವಿಷಕಾರಿಯಾಗಿದೆ.

ಅಂತಹ ಹಾವುಗಳ ಹಲ್ಲುಗಳು ಬಿಳಿ, ಹಳದಿ ಮತ್ತು ಕೆಂಪು ಬಣ್ಣದಲ್ಲಿರುತ್ತದೆ. ಹಾವು ನೈಸರ್ಗಿಕವಾಗಿ 108 ವರ್ಷಗಳವರೆಗೆ ಬದುಕಬಲ್ಲದು. ಅಕಾಲಿಕವಾಗಿ ಜನಿಸಿದ ಹಾವುಗಳು 75 ವರ್ಷಗಳಿಗಿಂತ ಹೆಚ್ಚು ಬದುಕಲು ಸಾಧ್ಯವಿಲ್ಲ. ಅಂದಹಾಗೆ, ಕೆಲವೊಮ್ಮೆ ಹಾವುಗಳು ಮನೆಯಲ್ಲಿ ಕಾಣಸಿಗುತ್ತವೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಆದರೆ ಇತ್ತೀಚೆಗಷ್ಟೇ ನಾಗರಹಾವೊಂದು ಮನೆಯ ಮಲಗುವ ಕೋಣೆಯಲ್ಲಿ ಪತ್ತೆಯಾಗಿವೆ. ಈ ಘಟನೆ ನಡೆದಿರುವುದು ಓಡಿಸ್ಸಾ ಬದ್ರಾಕ್ ಎನ್ನುವ ಊರಿನಲ್ಲಿ. ಮನೆಯ ಮಲಗುವ ಕೋಣೆಯಲ್ಲಿ ಪತ್ತೆಯಾದ ಈ ನಾಗರ ಹಾವನ್ನು ಉರಗ ತಜ್ಞರು ಹಿಡಿದು ಸುರಕ್ಷಿತ ತಾಣಕ್ಕೆ ಬಿಟ್ಟಿದ್ದಾರೆ. ನಾಗರಹಾವಿನ ಭಯಾನಕ ವಿಡಿಯೋ ನೋಡಲು ಈ ಕೆಳಗಿನ ವಿಡಿಯೋವನ್ನು ನೋಡಿ.