Video: ಮಲಗುವ ಕೋಣೆಯಲ್ಲಿ ಎಡೆಯೆತ್ತಿ ನಿಂತ ನಾಗರಹಾವು, ಹಾವು ಕಂಡೊಡನೆ ಮನೆಯವರು ಮಾಡಿದ್ದೇನು ಗೊತ್ತಾ? ಇಲ್ಲಿದೆ ವಿಡಿಯೋ

ಜಗತ್ತಿನ ಸೃಷ್ಟಿಯೇ ಅದ್ಭುತವೆನ್ನಬಹುದಾಗಿದೆ. ಈ ಸೃಷ್ಟಿಯ ಪ್ರತಿಯೊಂದು ಜೀವಿಯ ರಚನೆಯೂ ವಿಭಿನ್ನತೆಯಿಂದ ಕೂಡಿರುತ್ತವೆ. ಅದರ ಜೊತೆಗೆ, ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದ್ದರೂ, ಬದುಕುವ ರೀತಿಯೂ ವಿಭಿನ್ನವಾಗಿರುತ್ತವೆ. ಇಲ್ಲಿ ಯಾವುದೇ ಜೀವಿಗಳೂ ಮನುಷ್ಯರಷ್ಟು ಕ್ರೂರವಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕು. ಹೌದು, ಯಾವುದೇ ಜೀವಿಯೂ ಆಕ್ರಮಣ ಮಾಡಿದಾಗ, ತನ್ನ ಜೀವವನ್ನು ರಕ್ಷಿಸಲು ಪ್ರಕೃತಿ ಅದ್ಭುತವಾದ ದೇಹ ರಚನೆಯನ್ನು ಸೃಷ್ಟಿಸಿದೆ. ಹೀಗಾಗಿ ಜೀವ ಸಂಕುಲದಲ್ಲಿರುವ ಪ್ರತಿಯೊಂದು ಜೀವಿಯೂ ತನ್ನನ್ನು ರಕ್ಷಿಸಿಕೊಂಡು ಬದುಕುವುದು ಸರ್ವೇ ಸಾಮಾನ್ಯ. ಮನುಷ್ಯನು ತನಗೆ ನೋವಾದಾಗ ಸಹಜವಾಗಿ ತನ್ನ ಎದುರಿನ ವ್ಯಕ್ತಿ ಪ್ರತಿಕ್ರಿಯೆ ಸೂಚಿಸುತ್ತಾನೆ. ಹೌದು ಇಲ್ಲಿ ಪ್ರಾಣಿಗಳಿರಲಿ, ಪಕ್ಷಿಗಳಿರಲಿ, ವಿಷ ಜಂತುಗಳು ಇರಲಿ. ಪ್ರತಿಯೊಂದು ಜೀವಿಗಳಿಗೂ ಪ್ರಾಣ ಉಳಿಸಿಕೊಳ್ಳಲು, ಬೇರೆ ಜೀವಿಯೊಂದು ಆಕ್ರಮಣ ಮಾಡಿದಾಗ ತಪ್ಪಿಸಿಕೊಳ್ಳಲು ಅಸ್ತ್ರಗಳು ಇವೆ.

ಸಾಮಾನ್ಯವಾಗಿ ಹಾವು ಕಂಡರೆ ಒಂದು ಕ್ಷಣ ಭಯ ಪಡುವುದು ಸಹಜ. ಆದರೆ ಈ ಹಾವುಗಳು ನಮ್ಮಂತೆ ಜೀವಿಗಳು. ಅವುಗಳು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಕಚ್ಚುತ್ತದೆಯೇ ಹೊರತು, ಬೇರೆ ಯಾವ ಉದ್ದೇಶವನ್ನು ಹೊಂದಿರುವುದಿಲ್ಲ. ಮನುಷ್ಯರಂತೆ ಅದಕ್ಕೂ ಹೆದರಿಕೆ ಅನ್ನುವುದು ಇದೆ. ಮಾನವ ಹೇಗೆ ಕಾಡು ಪ್ರಾಣಿಗಳು, ಹಾವುಗಳನ್ನು ನೋಡಿ ಹೆದರಿಕೊಳ್ಳುತ್ತಾನೋ, ಆ ಜೀವಿಗಳು ಕೂಡ. ಮನುಷ್ಯರನ್ನು ನೋಡಿ ಹೆದರಿಕೊಳ್ಳುತ್ತವೆ. ಹೌದು ಹಾವನ್ನು ಕಂಡಾಗ ಮನುಷ್ಯ ತನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಾನೆ. ಈ ವಿಷಕಾರಿ ಹಾವುಗಳ ಬಗ್ಗೆ ವಿಚಾರಕ್ಕೆ ಬಂದರೆ ಕೇಳುವುದೇ ಬೇಡ. ಕೆಲವು ಉರಗ ಪ್ರೇಮಿಗಳು ಈ ಹಾವುಗಳನ್ನು ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ಹಿಡಿಯುವಂತೆ ಸಲೀಸಾಗಿ ಹಿಡಿಯುತ್ತಾರೆ. ಒಮ್ಮೆ ಇಂತಹ ದೃಶ್ಯವನ್ನು ನೋಡಿದಾಗ ಅಚ್ಚರಿಯ ಜೊತೆಗೆ ಭಯ ಕೂಡ ಆಗುತ್ತದೆ. ಹಾವು ಹಿಡಿದು, ವಿಷಕಾರಿ ಹಾವಿನಿಂದ ಕಚ್ಚಿಸಿಕೊಂಡು ಬಚಾವ್ ಆದವರು ನಮ್ಮ ಸುತ್ತ ಮುತ್ತಲಿನಲ್ಲಿ ಇದ್ದಾರೆ. ಸಾಮಾನ್ಯವಾಗಿ ಹಾವುಗಳು ಎಲ್ಲೆದರಲ್ಲಿ ಕಾಣಿಸುತ್ತವೆ. ಶೂ ಒಳಗೆ, ಮನೆಯ ಮಹಡಿಯ ಮೇಲೆ, ಮನೆಯ ಕೋಣೆಯ ಸಂಧಿಯಲ್ಲಿ ಹೀಗೆ ಕಾಣಸಿಗುತ್ತವೆ. ಹೀಗೆ ಕಂಡ ಹಾವುಗಳನ್ನು ರಕ್ಷಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ.

ಈ ಹಾವುಗಳನ್ನು ಎರಡು ವಿಧವಾಗಿ ವಿಂಗಡಣೆ ಮಾಡಲಾಗಿದೆ. ಈ ವಿಷಕಾರಿ ಹಾವುಗಳಿಗಿಂತ, ವಿಷರಹಿತ ಹಾವುಗಳ ಪ್ರಭೇದಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದರೆ ನಂಬಲೇ ಬೇಕು. ನಮ್ಮ ದೇಶದಲ್ಲಿಯೇ, ಈವರೆಗೆ ಸುಮಾರು 275 ಹಾವಿನ ಪ್ರಭೇದಗಳಲ್ಲಿ, ಸುಮಾರು 60 ಪ್ರಭೇದಗಳು ಮಾತ್ರ ವಿಷಕಾರಿಯಾಗಿದೆ. ಆದರೆ, ಮೇಲ್ನೋಟಕ್ಕೆ ಒಂದೇ ತರಹ ಕಾಣುತ್ತದೆ. ಭಾರತದಲ್ಲಿ ಕಂಡುಬರುವ ಹಾವುಗಳಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ವಿಷಕಾರಿ ಹಾವುಗಳು ಮತ್ತು ವಿಷಕಾರಿ ಅಲ್ಲದ ಹಾವುಗಳು ಎಂದು ಎರಡು ವಿಧಗಳಿವೆ. ವಿಷಕಾರಿ ಹಾವುಗಳಲ್ಲಿ ಎರಡು ವಿಷಗಳಿವೆ. ಅವುಗಳಲ್ಲಿ ಮೊದಲನೆಯದು ವಿಷಕಾರಿ ಹಾವುಗಳು ಮತ್ತು ಎರಡನೆಯದು ಅಲ್ಪ ವಿಷಕಾರಿ ಹಾವುಗಳು. ವಿಷಕಾರಿ ಹಾವುಗಳು ಮನುಷ್ಯರಿಗೆ ಕಚ್ಚಿದ್ದಲ್ಲಿ ಸಾವು ಸಂಭವಿಸಬಹುದು. ಆದರೆ ಅಲ್ಪ ವಿಷಕಾರಿ ಹಾವುಗಳ ವಿಷ ಮನುಷ್ಯರಿಗೆ ಕಚ್ಚಿದರೆ ಯಾವುದೇ ತೊಂದರೆಯಾಗುವುದಿಲ್ಲ. ಹಾವುಗಳಿಗೆ ವಿಷ ಇರುವುದು ಮುಖ್ಯವಾಗಿ ಅವುಗಳು ಬೇಟೆಯಾಡಲು ಎಂಬುದರ ಬಗ್ಗೆ ಗೊತ್ತಿದ್ದರೂ ಭಯ ಪಟ್ಟುಕೊಳ್ಳುತ್ತೇವೆ. ತಾನು ಬದುಕಲು ಜೀವಿಯನ್ನು ಸಾಯಿಸಲು ಮತ್ತು ತಿಂದು ಅವುಗಳನ್ನು ಜೀರ್ಣಿಸಿಕೊಳ್ಳಲು ಈ ವಿಷ ಎನ್ನುವುದು ಮುಖ್ಯವಾಗಿರುತ್ತದೆ. ಆದರೆ ನಾವು ಮಾತ್ರ ಈ ವಿಷಕಾರಿ ಹಾವನ್ನು ಕಂಡರೆ ಮಾರುದ್ಧ ದೂರ ಓಡುತ್ತೇವೆ.

ಆದರೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಲಗುವ ಕೋಣೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಬುಸ್ ಗುಟ್ಟತ್ತಾ ಎಡೆಯೆತ್ತಿ ನಿಂತ ಹಾವನ್ನು ಕಂಡೊಡನೆ ಎಲ್ಲರೂ ಭಯಭೀತರಾಗಿದ್ದಾರೆ. ಅಷ್ಟೇ ಅಲ್ಲದೇ, ಹಾವು ಕಂಡೊಡನೆ ಹಾವಿಗೆ ಕುಡಿಯಲು ಹಾಲಿಟ್ಟಿದ್ದಾರೆ. ಜನರನ್ನು ಕಂಡ ಹಾವು ಕೂಡ ಭಯಗೊಂಡಿದ್ದು, ತನ್ನ ಪ್ರಾಣಕ್ಕೆ ಅಪಾಯಯಿದೆ ಎಂದು ತಿಳಿದು ಎಡೆಯೆತ್ತಿ ಕುಳಿತಿದೆ. ಕೊನೆಗೆ ಉರಗ ತಜ್ಞರೊಬ್ಬರು ನಾಗರಹಾವನ್ನು ರಕ್ಷಿಸಿದ್ದಾರೆ. ಈ ಘಟನೆಯೂ ನಡೆದಿರುವುದು ಓಡಿಸ್ಸಾದ ಬದ್ರಕ್ ಎನ್ನುವ ಊರಿನಲ್ಲಿ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿ ಕೆಲವರು ಭಯ ಪಟ್ಟುಕೊಂಡಿದ್ದಾರೆ, ನೀವು ಕೂಡ ಈ ಭ’ ಯಾನಕ ವಿಡಿಯೋವನ್ನು ನೋಡಬಹುದು.