Video: ಗೂಡಿನಲ್ಲಿದ್ದ ಮೊಟ್ಟೆ ಕದಿಯಲು ಬಂದ ಮನುಷ್ಯನಿಗೆ ಹದ್ದು ಮಾಡಿದ್ದೇನು ನೋಡಿ.. ವಿಡಿಯೋ

ಹೆತ್ತವರಿಗೆ ಮಕ್ಕಳೇ ಆಸ್ತಿ, ಸಂಪತ್ತು. ಮಕ್ಕಳ ಒಳಿತಿಗಾಗಿ ಹೆತ್ತವರು ಯಾವ ಕಷ್ಟಗಳನ್ನು ಸಂಧಿಸುವುದಕ್ಕೂ ಸಿದ್ಧರಿರುತ್ತಾರೆ. ಎಂತಹ ಪರಿಸ್ಥಿತಿಯನ್ನು ದಾಟಿ ಬರುವುದಕ್ಕೂ ಸಜ್ಜಾಗಿರುತ್ತಾರೆ. ಹೆತ್ತವರ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಮನುಷ್ಯರೆಂದಲ್ಲಾ ಈ ಲೋಕದ ಪ್ರತಿಯೊಂದು ಜೀವರಾಶಿಯಲ್ಲೂ ಇದೇ ತೆರನಾದ ಪ್ರೀತಿಯನ್ನು ನಾವು ಕಾಣಬಹುದಾಗಿದೆ. ಇದಕ್ಕೆ ಬೇಕಾದಷ್ಟು ಸಾಕ್ಷಿಗಳೂ ಇವೆ. ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಸಂದರ್ಭದಲ್ಲಿ ಇಂತಹ ದೃಶ್ಯಗಳು ಕಾಣಸಿಗುತ್ತವೆ.

ಇದೀಗ ಇಂತಹದ್ದೇ ಮತ್ತೊಂದು ಫೋಟೋ ಮತ್ತು ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇದು ತಾಯಿ ಹದ್ದು ತನ್ನ ಮೊಟ್ಟೆಗಳನ್ನು ಹಿಮದಿಂದ ಕಾಪಾಡಿಕೊಳ್ಳುವ ದೃಶ್ಯ. ಈ ಹಿಂದೆ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿತ್ತು. ಇದೀಗ ತಾಯಿ ಪ್ರೀತಿಯನ್ನು ಸಾರುವ ಈ ಫೋಟೋ ನೆಟ್ಟಿಗರ ಗಮನ ಸೆಳೆದಿದೆ.  ಇದರಲ್ಲಿ ಓರ್ವ ಕಾಡು ಮನುಷ್ಯ ತನ್ನ ಹೊಟ್ಟೆ ಹಸಿವನ್ನು ನೀಗಿಸುವ ಸಲುವಾಗಿ ಹದ್ದಿನ ಮೊಟ್ಟೆಯನ್ನು ಕದಿಯಲು ಸಂಚು ಮಾಡುತ್ತಾನೆ. ಆಗ ಮೊದಲು ಹದ್ದು ತನ್ನ ಗೂಡನ್ನು ಮುಟ್ಟಲು ಸಹ ಬಿಡಲಾರದು ಆದರೆ ಕಾಲಕ್ರಮೇಣ ಹದ್ದು ಇಲ್ಲದ ಸಂದರ್ಭ ಈ ಕಾಡು ಮನುಷ್ಯ ದೈತ್ಯ ಮರವೊಂದರ ಪೊಟಾರೆಯಲ್ಲಿರುವ ಹದ್ದಿನ ಗೂಡಿನತ್ತ ಬರುತ್ತಾನೆ ಬಳಿಕ ಬೇಗನೆ ನಾಲ್ಕು ಮೊಟ್ಟೆ ಕದ್ದು ಕೆಳಗಿಳಿಯುತ್ತಾನೆ ಆಗ ಹದ್ದು ಸಹ ಅವನನ್ನು ನೋಡಿಮೊಟ್ಟೆ ವಾಪಾಸು ನೀಡುವಂತೆ ಕುಕ್ಕುತ್ತದೆ. ಹೇಗೋ ಮಾಡಿ ಕಾಡಿನ ಹಾದಿ ಹಿಡಿದು ಬಳಿಕ ಬಂಡೆಯೊಂದರಲ್ಲಿ ಬೆಂಕಿ ಕಾಯಿಸಿ ಮೊಟ್ಟೆ ಬೇಯಿಸಿ ತಿನ್ನುತ್ತಾನೆ. ಇದನ್ನು ಕಂಡ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಎಲ್ಲೆಡೆ ಈ ವೀಡಿಯೋ ಕುರಿತು ಸಾಕಷ್ಟು ಚರ್ಚೆ ಸಹ ಏರ್ಪಡುತ್ತಲೇ ಇದೀಗ ವೀಡಿಯೋ ಅಸಲಿಯತ್ತು ಹೊರಬಿದ್ದಿದೆ. ನಿಜವಾಗಿ ಈ ವೀಡಿಯೋ ತಾಯಿಯ ಕರುಣೆ ಮಮತೆ ಕುರಿತಾಗಿ ಆಗಿರದೆ ಎಲ್ಲವೂ ಪೂರ್ವ ನಿಯೋಜಿತ ಎಂದು ತಿಳಿದುಬಂದಿದೆ. ಇದರಲ್ಲಿ ಹದ್ದಿನ ಗೂಡನ್ನು ಕೆಡವಲು ಆ ವ್ಯಕ್ತಿ ಬಂದಿದ್ದಾನೆಂದು ಹದ್ದು ಸಿಟ್ಟಾಗಿದ್ದ ವಿಚಾರವನ್ನು ತಿರುಚಲಾಗಿದೆ. ಬಳಿಕ ಅದು ಕೋಳಿ ಮೊಟ್ಟೆ ವೀಡಿಯೋದಲ್ಲಿರುವ ವ್ಯಕ್ತಿ ಕಾಡುಮನುಷ್ಯ ಅಲ್ಲ ಎಂಬುದನ್ನು ಸಹ ಬಯಲು ಮಾಡಲಾಗಿದೆ. ಇದೊಂದು ಕಂಟೆಂಟ್ ಕ್ರಿಯೇಟಿವ್ ಸಿನೆಮಾ ವೀಡಿಯೋ ಇದರಲ್ಲಿ ಸತ್ಯಾಂಶವಿಲ್ಲ ಎಂಬ ಅಂಶ ಎಲ್ಲರ ನಿಟ್ಟುಸಿರಿಗೆ ಕಾರಣವಾಗಿದೆ. ಒಟ್ಟಾರೆಯಾಗಿ ಇಂತಹ ಹಲವು ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿದ್ದು ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸವನ್ನು ಪರಮರ್ಶಿಸುವುದು ಅಗತ್ಯವಾಗಿದೆ.