Video: ಉದ್ದನೆಯ ವಿಷಕಾರಿ ಕೋಬ್ರಾ ಹಾವಿಗೆ ಮುತ್ತು ಕೊಟ್ಟ ಯುವಕನ ಗತಿ ಏನಾಯ್ತು ನೋಡಿ… ವಿಡಿಯೋ

ಹಾವುಗಳೆಂದ್ರೆ ಯಾರಿಗೆ ಭಯ ಇಲ್ಲ ಹೇಳಿ. ನಾವು ದಿನನಿತ್ಯ ಸಂಚರಿಸುವ ದಾರಿಯಲ್ಲಿ ಹಾವು ಕಂಡ್ರೆ ದಾರಿಯನ್ನೇ ಬದಲಿಸುವವರು ನಮ್ಮ ನಿಮ್ಮ ನಡುವೆ ಇದ್ದಾರೆ. ಇನ್ನು ಕೆಲವರು ಮನೆಯಲ್ಲಿ ಹಾವು ಕಂಡ್ರೆ ನೂರು ಮೀಟರ್ ದೂರ ಇಡ್ತಾರೆ. ಮನೆ, ಕಾರ್, ಕಚೇರಿಯಲ್ಲಿ ಹಾವುಗಳು ಕಾಣಿಸಿಕೊಂಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಇದೀಗ ಅಂತಹುವುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ.

ಥೈಲ್ಯಾಂಡ್ ನಲ್ಲಿ ಯುವಕ ನೊಬ್ಬ ವಿಷಕಾರಿ ಹಾವಿಗೆ ಮುತ್ತಿಕ್ಕಿದ್ದಾನೆ.ಯುವಕ ಅತ್ಯಂತ ಸಲೀಸಾಗಿ ಹಾವಿಗೆ ಮುತ್ತಿಕ್ಕಿದ್ದಾನೆ.ಹಾವು ಯಾವಾಗ ಯಾರ ಮೇಲೆ ದಾಳಿ ಇಡುತ್ತದೆ ಎಂಬುದನ್ನು ಹೇಳಲಾಗದು. ಕೆಲವೊಂದು ಹಾವುಗಳು ಎಷ್ಟೊಂದು ವಿಷಕಾರಿಯಾಗಿರುತ್ತವೆ ಎಂದರೆ, ಯಾವುದೇ ಓರ್ವ ಮನುಷ್ಯನಿಗೆ ಅವು ಕಚ್ಚಿದರೆ, ಆ ಮನುಷ್ಯನ ಜೀವನ ಯಾತ್ರೆಯೇ ಮುಗಿದ್ಹೋಗುತ್ತದೆ. ಇದರ ಹೊರತಾಗಿಯೂ ಕೂಡ ಕೆಲ ಜನರು ಹಾವಿಗೆ ಕಿಂಚಿತ್ತು ಹೆದರುವುದಿಲ್ಲ.

ವಿಡಿಯೋದಲ್ಲಿ ಯುವಕ ವಿಶಾಲ ಕಾಯದ ಹಾವಿಗೆ ಕಿಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ನೋಡಲು ಇದು ತುಂಬಾ ಭಯಾನಕವಾಗಿದೆ. ಆದರೆ, ಯುವಕ ಮಾತ್ರ ತುಂಬಾ ಸಲೀಸಾಗಿ ಹಾವಿಗೆ ಮುತ್ತಿಕ್ಕಿದ್ದಾನೆ.ವಿಡಿಯೋ ಬಹಿರಂಗಗೊಳ್ಳುತ್ತಲೇ, ಸಾಮಾಜಿಕ ಮಾಧ್ಯಮ ಬಳಕೆದಾರರ ಮೈಮೇಲಿನ ರೋಮಗಳು ಎದ್ದು ನಿಂತಿವೆ. ಕಪ್ಪು ಬಣ್ಣದ ವಿಶಾಲಕಾಯ ಹಾವೊಂದು ಅಡವಿಯಲ್ಲಿ ತನ್ನ ಹೆಡೆಬಿಚ್ಚಿ ನಿಂತಿದೆ. ಈ ಸಂದರ್ಭದಲ್ಲಿ ಯುವಕ ಹಾವಿನ ಬಳಿ ಬರುತ್ತಾನೆ ಎಲ್ಲಕ್ಕಿಂತ ಮೊದಲು ಯುವಕ ಹಾವಿನ ಬಳಿಗೆ ಬಂದು ತನ್ನ ಕೈಯಿಂದ ಹಾವನ್ನು ಸವರಿ ಬಳಿಕ ಆತ ತನ್ನ ತುಟಿಗಳನ್ನು ಮುಂದಕ್ಕೆ ಮಾಡಿ ಹಾವನ್ನು ಮುತ್ತಿಕ್ಕಲು ಆರಂಭಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು.